ದಿನಭವಿಷ್ಯ: ಕೆಲಸದ ಸ್ಥಳದಲ್ಲಿ ಪ್ರಶಂಸೆ, ನಕಾರಾತ್ಮಕ ಚಿಂತೆನೆಗೆ ಕಿವಿಗೊಡದಿರಿ

ಮೇಷ
ಕೆಲಸದಲ್ಲಿನ ಹೊಣೆಗಾರಿಕೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ವೃಷಭ
ಅಧಿಕ ಕೆಲಸದ ಒತ್ತಡ. ಕಾಲಮಿತಿಯೊಳಗೆ ಪೂರೈಸಲೇಬೇಕಾದ ಪರಿಸ್ಥಿತಿ. ನಿರೀಕ್ಷಿತ ನೆರವು  ದೊರಕುವು ದಿಲ್ಲ. ನೀವೊಬ್ಬರೇ ಏಗಬೇಕಾಗುವುದು.

ಮಿಥುನ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಂಘರ್ಷ ಬರದಂತೆ ನೋಡಿಕೊಳ್ಳಿ. ಸಮತೋಲನ ಕಾಯ್ದು ಕೊಳ್ಳಿ. ಬಂಧುಗಳ ಹಿತ ಕಾಪಾಡಿ.

ಕಟಕ
ನಿಮ್ಮ ಕಾರ್ಯದಲ್ಲಿನ ಸಫಲತೆಗಾಗಿ ಇತರ ರಿಂದ ಮೆಚ್ಚುಗೆ ಗಳಿಸು ವಿರಿ. ಹೆಚ್ಚು ಭಾವನಾ ತ್ಮಕ ಸನ್ನಿವೇಶದಲ್ಲಿ ಸಿಲುಕುವಿರಿ. ಕೌಟುಂಬಿಕ ಉದ್ವಿಗ್ನತೆ.

ಸಿಂಹ
ಉತ್ಸಾಹಪೂರ್ಣ ದಿನ. ಆತ್ಮೀಯರೊಂದಿಗೆ ಆಪ್ತ ಕಾಲಹರಣ. ಉದ್ಯೋಗ ದಲ್ಲಿ ನಿರೀಕ್ಷಿತ ಬೆಳವಣಿಗೆ. ಸಾಧಿಸ ಬೇಕೆಂದು ಬಯಸಿದ ಕಾರ್ಯ ಸಫಲ.

ಕನ್ಯಾ
ಕೆಲಸದ ಕ್ಷೇತ್ರ ಮತ್ತು ಮನೆಯಲ್ಲಿ ಅನಪೇಕ್ಷಿತ ಪ್ರಸಂಗ ಎದುರಿಸುವಿರಿ. ಮಾನಸಿಕ ದೃಢತೆ ಕಾಯ್ದುಕೊಳ್ಳಬೇಕು. ಭಾವುಕರಾಗಿ ತಪ್ಪು ನಿರ್ಧಾರ ತಾಳದಿರಿ.

ತುಲಾ
ಇಂದು ಹಿನ್ನಡೆ ಅನುಭವಿಸುವಿರಿ. ಕೆಲಸಗಳು ನೀವಂದು ಕೊಂಡಂತೆ ನಡೆಯುವುದಿಲ್ಲ. ಶೇರು ವ್ಯವಹಾರದಲ್ಲಿ ಹಣ ಹೂಡಿಕೆ ತರವಲ್ಲ.

ವೃಶ್ಚಿಕ
ಅದೃಷ್ಟ ನಿಮಗಿದೆ. ನಿಮ್ಮ ಕಾರ್ಯದಲ್ಲಿ ಯಶಸ್ಸು. ಹಳೆಯ ಅಪೂರ್ಣ ಕಾರ್ಯ ವೊಂದು ಪೂರ್ಣಗೊಳ್ಳುವುದು. ನವವಿವಾಹಿತ ರಿಗೆ ಶುಭಸುದ್ಧಿ .

ಧನು
ಇಂದು ನೀವು ಬಾಕಿ ಉಳಿದಿರುವ ಕಾರ್ಯ ಪೂರೈಸಲು ಗಮನ ಕೊಡಬೇಕು. ಧನಾಗಮನ. ಆರೋಗ್ಯದಲ್ಲಿ ಸುಧಾರಣೆ.

ಮಕರ
ಪ್ರೀತಿಯ ವಿಷಯದಲ್ಲಿ ಮಹತ್ವದ ದಿನ. ಪ್ರಮುಖ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಸಂಕಷ್ಟಗಳು ಪರಿಹಾರ. ಕುಟುಂಬಸ್ಥ ರಿಂದ ನೆರವು.

ಕುಂಭ
ಕೆಲಸದಲ್ಲಿ ಪ್ರಗತಿ. ಆದರೆ ಖಾಸಗಿ ಜೀವನದಲ್ಲಿ ನಿರಾಶೆ. ಆರ್ಥಿಕ ಸ್ಥಿತಿ ಮತ್ತು ಪ್ರೀತಿಯ ವಿಷಯದಲ್ಲಿ ಹಿನ್ನಡೆ ಅನುಭವಿಸುವಿರಿ.
ಧನ ನಷ್ಟ

ಮೀನ
ಪ್ರೀತಿ ವಿಷಯದಲ್ಲಿ ಸವಾಲಿನ ದಿನ. ಕಷ್ಟದ ಸ್ಥಿತಿ ಎದುರಿಸುವಿರಿ. ಭಿನ್ನಾಭಿಪ್ರಾಯ ತಲೆದೋರಬಹುದು. ಆರ್ಥಿಕವಾಗಿ ಉನ್ನತಿ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!