ಮೇಷ
ಖಾಸಗಿ ಬದುಕಿನ ಸಮಸ್ಯೆ ಪರಿಹಾರ. ಚಿಂತೆ ನಿವಾರಣೆ. ವೃತ್ತಿಯಲ್ಲಿ ಅಪೇಕ್ಷಿತ ಬೆಳವಣಿಗೆ. ಸಹೋದ್ಯೋಗಿಗಳ ಸಹಕಾರ. ಹಣಕಾಸು ಸ್ಥಿತಿ ತೃಪ್ತಿಕರ.
ವೃಷಭ
ಇಂದು ಒತ್ತಡದ ದಿನ. ಅಸಹನೆ, ಜಡತ್ವ ಕಾಡಬಹುದು. ಇದರಿಂದ ಕಾರ್ಯ ವಿಳಂಬವಾದೀತು. ಕೌಟುಂಬಿಕ ಅಸಹನೆ, ವಾಗ್ವಾದ ಸಂಭವ.
ಮಿಥುನ
ಕೆಲವು ವಿಷಯಗಳಿಗೆ ಅತಿಯಾದ ಸಂವೇದನೆ ತೋರುವಿರಿ. ಆತ್ಮೀಯರ ವರ್ತನೆಯನ್ನು ಪರಾಮರ್ಶಿಸುತ್ತಾ ನಿಮ್ಮ ನೆಮ್ಮದಿ ಕಳಕೊಳ್ಳುವಿರಿ. ಸಮಚಿತ್ತ ಅಗತ್ಯ.
ಕಟಕ
ನಿಮ್ಮ ನಿರ್ಧಾರ ಇಂದು ಸರಿಯಾದ ದಿಕ್ಕಿನಲ್ಲಿ ಸಾಗುವುದು. ಇತರರ ನೆರವು ನಿಮ್ಮ ಯಶಸ್ಸಿಗೆ ಕಾರಣವಾಗುವುದು. ಆರ್ಥಿಕ ಚಿಂತೆ ಪರಿಹಾರ.
ಸಿಂಹ
ಕೆಲಸದ ಒತ್ತಡ ಕಡಿಮೆ. ಹಾಗಾಗಿ ನಿರಾಳ ದಿನ. ಆಪ್ತರೊಂದಿಗೆ ಸಮಯ ಕಳೆಯಲು ಸಾಕಷ್ಟು ಕಾಲಾವಕಾಶ ದೊರಕುವದು. ಕೌಟುಂಬಿಕ ನೆಮ್ಮದಿ.
ಕನ್ಯಾ
ವೃತ್ತಿ, ಪ್ರವೃತ್ತಿ, ಮೋಜು ಎಲ್ಲದರಲ್ಲೂ ಸಮತೋಲನ ಸಾಧಿಸಲು ಸಫಲರಾಗುವಿರಿ. ಹಾಗಾಗಿ ಯಾವುದೂ ನಿಮಗೆ ಹೊರೆ ಎಂದೆನಿಸದು.
ತುಲಾ
ಉದ್ಯಮ, ಕಾರ್ಯ, ವ್ಯವಹಾರ, ಕೌಟುಂಬಿಕ ಬದುಕು ಎಲ್ಲದರಲ್ಲೂ ಇಂದು ನಿಮಗೆ ಪೂರಕ ವಾತಾವರಣ. ಸಂತೋಷದ ಮನಸ್ಥಿತಿ. ಒತ್ತಡರಾಹಿತ್ಯ.
ವೃಶ್ಚಿಕ
ನಿಮ್ಮ ದೈನಂದಿನ ಕಾರ್ಯದಲ್ಲಿ ತುಸು ಬದಲಾವಣೆ ತನ್ನಿ. ಪ್ರಗತಿಯ ಕುರಿತು ಚಿಂತಿಸಿ. ಇದ್ದುದಷ್ಟೇ ಸಾಕು, ಇನ್ನೇನೂ ಬೇಡ ಎಂಬ ಧೋರಣೆ ಬಿಡಿ.
ಧನು
ವೃತ್ತಿಯಲ್ಲಿ ಸಫಲತೆ. ಆರೋಗ್ಯ ಸುಧಾರಣೆ. ಸಣ್ಣಪುಟ್ಟ ಕಿರಿಕಿರಿ ಉಂಟಾದರೂ ಅದು ನಿಮ್ಮ ಮೇಲೆ ಪರಿಣಾಮ ಬೀರಲಾರದು. ಕೌಟುಂಬಿಕ ಸಹಕಾರ.
ಮಕರ
ನಿಮ್ಮ ಸುತ್ತ ಬದಲಾವಣೆ ಉಂಟಾಗುವುದು.ಅದಕ್ಕೆ ನೀವೂ ಹೊಂದಿಕೊಳ್ಳಬೇಕು. ನಿಮ್ಮದೇ ನಿಲುವಿಗೆ ಅಂಟಿಕೊಂಡು ಕೂರದಿರಿ.
ಕುಂಭ
ನಿಮ್ಮ ಬಹುದಿನದ ಗುರಿ ಸಾಧಿಸುವ ಕಾಲ ಸಮೀಪ ಬರಲಿದೆ. ಅಡ್ಡಿಗಳ ನಿವಾರಣೆ. ಅವಶ್ಯ ವ್ಯಕ್ತಿಗಳ ಸಹಕಾರ. ಕೌಟುಂಬಿಕ ಬಿಕ್ಕಟ್ಟು ಪರಿಹಾರ ಕಾಣುವುದು.
ಮೀನ
ಮನೆಯಲ್ಲಿ ಭಿನ್ನಮತ ಉದ್ಭವಿಸಿದ್ದರೆ ಅದನ್ನು ಮೊದಲು ನಿವಾರಿಸಿ. ಸ್ನೇಹಿತರು, ಕುಟುಂಬಸ್ಥರ ಮೇಲೆ ಅಧಿಕಾರ ಚಲಾಯಿಸದಿರಿ.