ದಿನಭವಿಷ್ಯ: ಭೂಮಿಯ ಖರೀದಿಗೆ ಸೂಕ್ತ ಸಮಯ, ಪ್ರಯತ್ನಕ್ಕೆ ಸರಿಯಾದ ಫಲ ಲಭಿಸಲಿದೆ

ಮೇಷ
ಆಪ್ತರಿಗೆ ನಿಮ್ಮ ವಿರುದ್ಧ ಮುನಿಸು ಉಂಟಾದೀತು. ಅವರ ಬೇಗುದಿ ಅರಿಯಿರಿ. ಕೆಲಸದಲ್ಲಿ ತೊಡಕು. ಸಹನೆಯಿಂದ ವರ್ತಿಸಿ.
ವೃಷಭ
ನಿಮ್ಮ ಕೆಲಸವನ್ನು ನಿಗಾ ಇಟ್ಟು ನೋಡು ವವರು ಇದ್ದಾರೆ.  ತಪ್ಪು ಎಸಗದಿರಿ. ಎಲ್ಲರ ಜತೆ ಹೊಂದಾಣಿಕೆ ಸಾಧಿಸಿ. ದ್ವೇಷ ಕಟ್ಟಿಕೊಳ್ಳದಿರಿ.
ಮಿಥುನ
ವೃತ್ತಿಯಲ್ಲಿ ಸಮಸ್ಯೆ. ಪರಿಹಾರ ಕಷ್ಟವಲ್ಲ. ಅನವಶ್ಯ ವಿಷಯಗಳಿಗೆ ಚಿಂತಿಸಿ ಮನಸ್ಸು ಹಾಳು ಮಾಡಿಕೊಳ್ಳದಿರಿ. ಖರ್ಚು ಹೆಚ್ಚಳ.
ಕಟಕ
ವೃತ್ತಿಯಲ್ಲಿ ಎಲ್ಲವೂ ಸುಗಮ. ಕಾರ್ಯಗಳು ಸಫಲ. ಕೌಟುಂಬಿಕ ಸಂಬಂಧ ಸುಮಧುರ. ಭಿನ್ನಮತವಿದ್ದರೂ ಅದು ನಿವಾರಣೆ. ನೆಮ್ಮದಿ.
ಸಿಂಹ
ಸಂಬಂಧದಲ್ಲಿ ವಾಗ್ವಾದ ಉಂಟಾದೀತು. ನೀವು ಸಹನೆ ವಹಿಸು ವುದು ಅಗತ್ಯ. ಆರೋಗ್ಯ ಸಮಸ್ಯೆಯಿದ್ದರೆ  ವೈದ್ಯರ ಭೇಟಿ ಮಾಡುವುದೊಳಿತು.
ಕನ್ಯಾ
ನಿಮ್ಮ ಕೆಲಸಕ್ಕೆ ಕೆಲವರ ಅಡ್ಡಗಾಲು. ಖರ್ಚು ಹೆಚ್ಚುವ ಪ್ರಸಂಗ ಒದಗುವುದು. ಬೆನ್ನು ನೋವು ಕಾಡಬಹುದು. ವಿಶ್ರಾಂತಿ ಅವಶ್ಯ.
ತುಲಾ
ವ್ಯವಹಾರದಲ್ಲಿ ಉಂಟಾಗಿದ್ದ ತೊಡಕು ನಿವಾರಣೆ. ಬಂಧುಗಳ ಅಸಹಕಾರದಿಂದ ಮನ ನೋಯಲಿದೆ. ಶಾಂತಚಿತ್ತ ಅಗತ್ಯ.
ವೃಶ್ಚಿಕ
ಕಠಿಣ ಕಾರ್ಯಕ್ಕೆ ಸೂಕ್ತ ಫಲ. ಆದರೆ ನಿಮ್ಮ ಕೆಲಸದ ಲಾಭ ಪಡೆಯಲು ಕೆಲವರು ಯತ್ನಿಸುವರು. ಅದಕ್ಕೆ ಆವಕಾಶ ಕೊಡಬೇಡಿ.
ಧನು
ಇಂದಿನ ಕೆಲಸ ಇಂದೇ ಮುಗಿಸಿ. ಕರ್ತವ್ಯದಲ್ಲಿ ಉದಾಸೀನ ಬೇಡ. ಅದು ನಿಮಗೆ ಪ್ರತಿಕೂಲ ವಾದೀತು. ಕುಟುಂಬ ಸದಸ್ಯರ ಅಸಹಕಾರ.
ಮಕರ
ನಿಮ್ಮ ಕೆಲಸದ ಕುರಿತಂತೆ ನಿಮಗೇ ಅಸಮಾಧಾನ. ನಿಮ್ಮ ಬದುಕಿನಲ್ಲಿ ಇತರರ ಹಸ್ತಕ್ಷೇಪ ನಡೆಯುವುದು. ಸಹನೆ ಕಾಯ್ದುಕೊಳ್ಳಿ.
ಕುಂಭ
ವಯಸ್ಸಾದವರು  ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ. ಕುಟುಂಬ ಸದಸ್ಯರಿಂದ ಅಸಹಕಾರ. ಮನಸ್ಸಿಗೆ ಬೇಸರ. ಖರ್ಚು ಹೆಚ್ಚಳದಿಂದ ಅತೃಪ್ತಿ.
ಮೀನ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಭಿನ್ನಾಭಿಪ್ರಾಯ ತಲೆದೋರಿದರೂ ಬೇಗನೆ ನಿವಾರಣೆ.  ಆರ್ಥಿಕ ಒತ್ತಡ ಪರಿಹಾರ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!