ಮೇಷ
ಅತಿಯಾದ ಕೆಲಸದ ಒತ್ತಡ, ಕೆಲವರ ಅಸಹಕಾರ ನಿಮ್ಮ ಮನಶ್ಯಾಂತಿ ಹಾಳು ಮಾಡಲಿದೆ.ಆರಾಮವಾಗಿ ಇರಲು ಅವಕಾಶ ಸಿಗುವುದಿಲ್ಲ.
ವೃಷಭ
ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಿ.ಇಲ್ಲವಾದರೆ ನೋವುಣ್ಣುವ ಪ್ರಸಂಗ ಎದುರಿಸುವಿರಿ.ಸಣ್ಣ ಹಿನ್ನಡೆಗೆ ಎದೆಗುಂದದಿರಿ.
ಮಿಥುನ
ಇಂದು ನಿಮಗೆ ಸಮಸ್ಯೆ ಕಾಡಲಾರದು. ಎಲ್ಲವೂ ಸರಿಯಾಗಿದೆ. ಆದರೂ ಮನದಲ್ಲೇನೋ ಕೊರಗು. ಯಾವುದೊ ಕೊರತೆ ಉಳಿದಿದೆ ಎಂಬ ಭಾವನೆ.
ಕಟಕ
ಇಂದು ಸಾಲ ಪಡೆಯುವ ಅಥವಾ ಕೊಡುವ ಕಾರ್ಯಕ್ಕೆ ಮುಂದಾಗದಿರಿ.ಅದು ಭವಿಷ್ಯದಲ್ಲಿ ಮನಶ್ಯಾಂತಿ ಕದಡಲಿದೆ. ಕೌಟುಂಬಿಕ ಮನಸ್ತಾಪ ಸಂಭವ.
ಸಿಂಹ
ಏಕತಾನತೆಯ ಬದುಕು ಬೇಸರ ತಂದೀತು. ಬದಲಾವಣೆಗೆ ತುಡಿಯುವಿರಿ. ಇದಕ್ಕೆ ಪರಿಹಾರ ನಿಮ್ಮಲ್ಲೇ ಇದೆ. ಹೊಸ ಯೋಜನೆ ಹಾಕಿಕೊಳ್ಳಿ.
ಕನ್ಯಾ
ಇಂದಿನ ದಿನ ನಿಮಗೆ ಪೂರಕವಾಗಿದೆ. ಉದ್ದೇಶಿಸಿದ ಕಾರ್ಯ ಪೂರ್ಣ. ಮುಖ್ಯ ವಿಚಾರಗಳಲ್ಲಿ ನಿಮಗೆ ಅನುಕೂಲ ಬೆಳವಣಿಗೆ. ಕೌಟುಂಬಿಕ ಸಹಕಾರ.
ತುಲಾ
ಅತಿಯಾದ ಉತ್ಸಾಹ ನಿಮ್ಮ ಕೆಲಸ ಹಾಳು ಮಾಡೀತು. ಕೌಟುಂಬಿಕ ವಿಚಾರದಲ್ಲಿ ಅತೃಪ್ತಿ, ಅಸಮಾಧಾನ ಕಾಡಬಹುದು. ಸಂಯಮ ಒಳಿತು.
ವೃಶ್ಚಿಕ
ಪ್ರಮುಖ ನಿರ್ಧಾರ ತಾಳುವುದರಿಂದ ಇಂದು ದೂರವಿರಿ. ಏಕೆಂದರೆ ಎಲ್ಲವೂ ನಿಮಗೆ ಅನುಕೂಲಕರವಾಗಿ ಸಾಗದು. ಕಾದು ನೋಡುವುದು ಉತ್ತಮ.
ಧನು
ನಿಮ್ಮ ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಲು ಮುಜುಗರ ಬೇಡ. ಕೆಲವೊಮ್ಮೆ ನಿರೀಕ್ಷಿಸದ ಕಡೆಯಿಂದ ಪರಿಹಾರ ಸಿಗಬಹುದು. ಹಣದ ಕೊರತೆ.
ಮಕರ
ಕೆಲವು ವಿಷಯಗಳಲ್ಲಿ ನಿಮ್ಮ ಹಸ್ತಕ್ಷೇಪ ನಿರೀಕ್ಷಿತ ಫಲ ನೀಡದು. ಅದನ್ನು ಸುಮ್ಮನೇ ಬಿಟ್ಟರೆ ಒಳಿತಿತ್ತು ಎಂದು ಅನಿಸಲಿದೆ. ಎಚ್ಚರದಿಂದ ನಡಕೊಳ್ಳಿ.
ಕುಂಭ
ನಿರಾಳತೆಯಿಂದ ದಿನ ಕಳೆಯುವ ಅವಕಾಶ. ದೈನಂದಿನ ಗೋಜಲು ಬಾಧಿಸುವುದಿಲ್ಲ. ಆಪ್ತರ ಸಾಹಚರ್ಯ ಖುಷಿ ಕೊಡುವುದು. ವ್ಯಯ ಅಧಿಕವಾಗುವುದು.
ಮೀನ
ನಿಮ್ಮ ಕಾರ್ಯವನ್ನು ಸಮರ್ಥವಾಗಿ ಮಾಡುವಿರಿ.ಚಿಂತೆಯೊಂದು ಪರಿಹಾರವಾಗಿ ನೆಮ್ಮದಿ. ಕುಟುಂಬಸ್ಥರ ಆರೋಗ್ಯ ವೃದ್ಧಿ.