ದಿನಭವಿಷ್ಯ: ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವ ಸಾಧ್ಯತೆ, ಎಚ್ಚರ!

ಮೇಷ
ನಿಮ್ಮ ನಿಷ್ಠೆಯ ಕಾರ್ಯ ಉತ್ತಮ ಫಲ ನೀಡುವುದು. ಹಣದ ಹರಿವು ಅಬಾಧಿತ. ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಇತರರ ನೆರವು ಲಭ್ಯ.

ವೃಷಭ
ನೀವಿಂದು ಎಲ್ಲರಿಗೆ ಮಾದರಿಯಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಿರಿ. ಮೆಚ್ಚುಗೆ ಪಡೆಯುವಿರಿ. ದೈಹಿಕ ಕ್ಷಮತೆ ಉತ್ತಮ. ಆದಾಯ ಹೆಚ್ಚಳ.

ಮಿಥುನ
ಯಾವುದೇ ಪ್ರತಿಕೂಲ ಪರಿಸ್ಥಿತಿ ಒದಗಿದರೂ ಸಹನೆ ಕಾಯ್ದುಕೊಳ್ಳಿ. ಕೆಲಸದ ಒತ್ತಡ ಹೆಚ್ಚು. ಅದನ್ನು ತಾಳಿಕೊಂಡು ನಿರ್ವಹಿಸಿ. ಹಣಕಾಸು ಒತ್ತಡ.

ಕಟಕ
ವೃತ್ತಿ, ಪ್ರೀತಿ, ಆರ್ಥಿಕ ಪರಿಸ್ಥಿತಿ ಎಲ್ಲದರಲ್ಲೂ ನಿಮಗೆ ಪೂರಕ ಬೆಳವಣಿಗೆ. ಭಿನ್ನಮತ ನಿವಾರಿಸಿ ಸಂಬಂಧ ಸ್ಥಿರವಾಗಿಡಲು ಸಫಲರಾಗುವಿರಿ.

ಸಿಂಹ
ಆತ್ಮೀಯರ ಭಾವನೆಗೆ ಸೂಕ್ತವಾಗಿ ಸ್ಪಂದಿಸಿ. ಅವರಿಗೆ ಕಡೆಗಣಿಸಿದ ಭಾವ ಉದಿಸದಿರಲಿ. ಸಣ್ಣಪುಟ್ಟ ಹಿನ್ನಡೆಗೆ ಧೃತಿಗೆಡದಿರಿ. ಧೈರ್ಯ ತಂದುಕೊಳ್ಳಿ.

ಕನ್ಯಾ
ವೃತ್ತಿ ಸಂಬಂಧ ಪ್ರಯಾಣ ಸಂಭವ. ವೃತ್ತಿ ಕಾರ್ಯ ಸಫಲತೆ ಕಾಣುವುದು. ಆದಾಯದಲ್ಲಿ ಹೆಚ್ಚಳ. ಪ್ರೀತಿಪಾತ್ರರ ಜತೆ ಕಾಲಕ್ಷೇಪ.

ತುಲಾ
ಉತ್ಸಾಹಕಾರಿ ದಿನ. ವೈಯಕ್ತಿಕ  ಸಮಸ್ಯೆ ಪರಿಹಾರ. ಮನಸ್ಸಿಗೆ ನಿರಾಳತೆ. ಬಂಧುಗಳ ಜತೆ ಕಾಲಕ್ಷೇಪ. ಆರೋಗ್ಯ ಸಂಬಂಧಿ ಕಳವಳ ದೂರ.

ವೃಶ್ಚಿಕ
ಸಣ್ಣ ವಿಷಯಕ್ಕೂ ಉದ್ವಿಗ್ನಗೊಳ್ಳದಿರಿ. ಅದರಿಂದ ಆರೋಗ್ಯಕ್ಕೆ ಹಾನಿ. ಆತ್ಮೀಯ ಸಂಬಂಧ ಹಾಳಾಗಲು ಅವಕಾಶ ಕೊಡಬೇಡಿ. ಹೊಂದಾಣಿಕೆ ಮುಖ್ಯ.

ಧನು
ಸಕಾಲದಲ್ಲಿ ಕಾರ್ಯ ಮುಗಿಸಿ ತೃಪ್ತಿ ಪಡೆಯುವಿರಿ. ಮನಸ್ಸನ್ನು ಕಾಡುತ್ತಿದ್ದ ವಿಷಯವೊಂದು ಇತ್ಯರ್ಥ ಕಾಣುವುದು. ಆದಾಯ ಹೆಚ್ಚು.

ಮಕರ
ನಿಮ್ಮ ಚಟುವಟಿಕೆಯಲ್ಲಿ ಇಂದು ಉತ್ಸಾಹ ಕುಂದುವುದು. ಸಣ್ಣ ಹಿನ್ನಡೆ ಅದಕ್ಕೆ ಕಾರಣ. ಹಣಕಾಸು ವಿಚಾರವನ್ನು ಸಮರ್ಥವಾಗಿ ನಿಭಾಯಿಸಿ.

ಕುಂಭ
ಕುಟುಂಬ ಮತ್ತು ಸ್ನೇಹಿತರ ಜತೆ ಹೆಚ್ಚು ಕಾಲ ಕಳೆಯಿರಿ. ಅವರ ತಪ್ಪಭಿಪ್ರಾಯ ನಿವಾರಿಸಲು ಆದ್ಯತೆ ಕೊಡಿ. ಆರ್ಥಿಕ ಮುಗ್ಗಟ್ಟು ಕಾಡೀತು.

ಮೀನ
ವೃತ್ತಿ ಕಾರ್ಯದಲ್ಲಿ ಯಶಸ್ಸು. ಉತ್ತಮ ಫಲಿತಾಂಶ. ಕುಟುಂಬ ಸದಸ್ಯರ ಉತ್ತಮ ನಿರ್ವಹಣೆಯಿಂದ ನೆಮ್ಮದಿ. ಆರೋಗ್ಯ ಸ್ಥಿತಿ ಸುಸ್ಥಿರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!