ದಿನಭವಿಷ್ಯ: ಇಂದು ಶ್ರಮಪಟ್ಟು ಮಾಡಿದ ಕೆಲಸ ಕೊನೆಯ ಕ್ಷಣದಲ್ಲಿ ಹಾಳಾಗಬಹುದು

ಮೇಷ
ನಿಮ್ಮ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ನಯವಾದ ಮಾತು ಕೆಲಸದ ಸಾಫಲ್ಯಕ್ಕೂ ನೆರವಾಗುತ್ತದೆ. ಕೌಟುಂಬಿಕ ನೆಮ್ಮದಿ.

ವೃಷಭ
ನಿಮ್ಮ ಸಮಸ್ಯೆ ಮತ್ತು ಮನಸ್ಸಿನ ಅಶಾಂತಿ ಪರಿಹರಿಸಲು ಕೆಲವರು ನೆರವಾಗುವರು.ಅವರ ಕುರಿತು ಕೃತಜ್ಞತೆಯಿರಲಿ.   ಕೌಟುಂಬಿಕ ಬಿಕ್ಕಟ್ಟು ನಿವಾರಣೆ.

ಮಿಥುನ
ಸಂಬಂಧವೊಂದು ಇನ್ನಷ್ಟು ದೃಢಪಟ್ಟೀತು. ಸಣ್ಣಪುಟ್ಟ ಭಿನ್ನಮತ ಪರಿಹರಿಸಿಕೊಳ್ಳಬೇಕು. ವೃತ್ತಿಯಲ್ಲಿ  ಕೆಲವು ಒತ್ತಡ ಎದುರಿಸುವಿರಿ.ಅನ್ಯರ ನೆರವು ದೊರಕದು.

ಕಟಕ
ಅನಪೇಕ್ಷಿತ ಪ್ರಸಂಗ ಎದುರಿಸುವಿರಿ.ನಿಮ್ಮ ಮನಸ್ಥಿತಿ ಕೂಡಾ ಕೆಡಬಹುದು. ಆದರೆ ಸಂಯಮ ಕಳಕೊಳ್ಳದಿರಿ. ಸಮಾಧಾನದಿಂದ ವ್ಯವಹರಿಸಿರಿ.

ಸಿಂಹ
ಈಗಿನ ಪರಿಸ್ಥಿತಿ ನಿಮಗೆ ಸಮಾಧಾನ ತರದು.ವೃತ್ತಿಯಲ್ಲೂ ಅಸಮಾಧಾನ. ಹಾಗಾಗಿ ಪರಿಸ್ಥಿತಿ ಬದಲಿಸಲು ಯೋಜಿಸಿದರೆ ದೃಢ ಮನಸ್ಸು ತಳೆಯಿರಿ.

ಕನ್ಯಾ
ಬಿಡುವಿಲ್ಲದ ದಿನ. ಸಮಸ್ಯೆ ಪರಿಹರಿಸಲು ಮೊದಲಾಗಿ ಇಬ್ಬಂದಿತನ ತೊರೆಯಿರಿ. ಏಕಮನಸ್ಸಿನಿಂದ ಕಾರ್ಯ ಎಸಗಿ. ಅವಶ್ಯ ನೆರವು ಲಭ್ಯ.

ತುಲಾ
ವ್ಯಕ್ತಿಯೊಬ್ಬರ ಕುರಿತು ಅತಿಯಾದ ಕಾಳಜಿ ತೋರುವಿರಿ.ಅವರಿಗಾಗಿ ಸಮಯ ವ್ಯಯಿಸುವಿರಿ.ವೃತ್ತಿಯಲ್ಲಿ ಪ್ರತಿಕೂಲ ಪರಿಣಾಮ ಸಂಭವ. ಧನವ್ಯಯವಾದೀತು.

ವೃಶ್ಚಿಕ
ನಿಮ್ಮ ವೃತ್ತಿ ಜೀವನ ಕವಲುದಾರಿಯಲ್ಲಿದೆ.ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕಾದ ಕಾಲ.ಯಾರದೋ ಮಾತು ಕೇಳಿ ತಪ್ಪು ಹೆಜ್ಜೆ ಇಡಬೇಡಿ.

ಧನು
ಮನಸ್ಸು ವ್ಯಾಕುಲ. ಹೇಳಲಾಗದ ಕೊರಗು ಕಾಡುವುದು. ಆತ್ಮೀಯರ ಸಂಗಕ್ಕೆ ಹಾತೊರೆಯುವಿರಿ. ವೃತ್ತಿಯಲ್ಲಿ ಉದ್ದೇಶ ಸಾಧನೆಯಾಗದ ನಿರಾಶೆ.

ಮಕರ
ಬಾಕಿ ಉಳಿದ ಕಾರ್ಯ ಮುಗಿಸಿರಿ.ಇಲ್ಲವಾದರೆ ಅದೇ ಉದ್ವಿಗ್ನತೆ ಕಾಡುವುದು. ಸಹೋದ್ಯೋಗಿಗಳ ಕಿರುಕುಳ. ನೆಮ್ಮದಿ ಹಾಳಾದೀತು.

ಕುಂಭ
ಮುಂಜಾನೆ ಅವಧಿ ಮನಸ್ಸು ಬೇಸರದಿಂದ ತುಂಬಿರಬಹುದು.ಆದರೆ ಅಪರಾಹ್ನ ಉಲ್ಲಾಸ ತುಂಬಿಕೊಳ್ಳುವಿರಿ. ಆಪ್ತರ ಕರೆ ಮನಸ್ಸಿಗೆ ಮುದ ನೀಡಲಿದೆ.

ಮೀನ
ಹಳೆಯ ವಿಷಯ ವೊಂದು  ಮತ್ತೆ ನಿಮ್ಮ ಮನಸ್ಸು ಹಾಳು ಮಾಡಬಹುದು. ವ್ಯಕ್ತಿಯೊಬ್ಬರ ವರ್ತನೆಯಿಂದ ಮನಸ್ಸಿಗೆ ನೋವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!