ದಿನಭವಿಷ್ಯ: ಅನಗತ್ಯ ವೈಮನಸ್ಸು, ಅನಗತ್ಯ ಖರ್ಚು, ಕೆಲಸದಲ್ಲಿ ತೊಂದರೆ ಸಾಧ್ಯತೆ

ಮೇಷ
ಭಾವನೆಗಳ ಮೇಲೆ ನಿಯಂತ್ರಣವಿಟ್ಟು ಕಾರ್ಯ ಸಾಧಿಸಿ. ಅತಿಯಾದ ಒತ್ತಡವು ನಿಮ್ಮಿಂದ ತಪ್ಪು ಘಟಿಸುವಂತೆ ಮಾಡೀತು.

ವೃಷಭ
ಮನೆಯ ವ್ಯವಹಾರ ಸುಗಮವಾಗಿ ಸಾಗಲು ನೀವು ಶಾಂತಚಿತ್ತರಾಗಿ ವ್ಯವಹರಿಸಬೇಕು. ವಾಗ್ವಾದಕ್ಕೆ ಅವಕಾಶ ಕೊಡದಿರಿ.

ಮಿಥುನ
ಪ್ರಗತಿಯ ದಿನ. ಉದ್ಯೋಗಕ್ಕೆ ಸಂಬಂಧಿಸಿ ನಿಮಗೆ ಅನುಕೂಲ ಬೆಳವಣಿಗೆ. ಮಹತ್ವದ ನಿರ್ಧಾರ ತಾಳಲು ಹಿಂಜರಿಯಬೇಕಿಲ್ಲ.

ಕಟಕ
ಎಲ್ಲ ವಿಚಾರಗಳಲ್ಲಿ ಸಮಾಧಾನದಿಂದ  ಮುಂದುವರಿಯಿರಿ. ದುಡುಕು, ರೋಷ ಪ್ರತಿಕೂಲವಾದೀತು. ಆರೋಗ್ಯ ಸುಸ್ಥಿರ.

ಸಿಂಹ
ಕಾಡುವ ಆತಂಕ ನಿವಾರಣೆಯಾಗಿ ನಿರಾಳತೆ. ಕಾರ್ಯದಲ್ಲಿ ಯಶಸ್ಸು. ಪ್ರತಿಸ್ಪರ್ಧಿಗಳ ಎದುರು ಗೆಲುವು. ಆರೋಗ್ಯ ಸಮಸ್ಯೆ ಪರಿಹಾರ.

ಕನ್ಯಾ
ಫಲಪ್ರದ ದಿನ. ಪರಿಸ್ಥಿತಿಗೆ ತಕ್ಕಂತೆ  ಸೂಕ್ತ ನಿರ್ಧಾರ ತಾಳಲು ಸಫಲರಾಗುವಿರಿ. ಸಾಧ್ಯವಾಗದ ಹೊಣೆ ಹೊತ್ತುಕೊಳ್ಳಬೇಡಿ.

ತುಲಾ
ಉದ್ಯೋಗದಲ್ಲಿ ಉತ್ತಮ ನಿರ್ವಹಣೆ. ಪ್ರೀತಿಪಾತ್ರರಿಂದ ಅಚ್ಚರಿಯ ಕೊಡುಗೆ ಸಿಕ್ಕೀತು. ಆರ್ಥಿಕ ಉನ್ನತಿ. ಕೌಟುಂಬಿಕ ನೆಮ್ಮದಿ.

ವೃಶ್ಚಿಕ
ನೀವು ಬಯಸಿದ ಪ್ರಗತಿ ಸಾಧಿಸಲಾರಿರಿ.  ಏನಾದರೊಂದು ವಿಘ್ನ ಎದುರಾಗುವುದು. ಪ್ರಮುಖ ಕಾರ್ಯ ನಾಳೆಗೆ ಮುಂದೂಡಿ.

ಧನು
ಯಾವುದೇ ವಿಷಯ ಇತ್ಯರ್ಥ ಪಡಿಸುವಾಗ ಕ್ಷಿಪ್ರವಾಗಿ ಕಾರ್ಯಾಚರಿಸಿ. ಅದನ್ನು ಮುಂದೂಡುತ್ತಾ ಬರಬೇಡಿ. ಸಂಗಾತಿ ಜತೆಗೆ ಮನಸ್ತಾಪ ಸಂಭವ.

ಮಕರ
ನೀವು ಬಯಸಿದ ನಿರಾಳತೆ ಇಂದು ದೊರಕದು. ಏನಾದರೂ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅದನ್ನು ಪರಿಹರಿಸುವಲ್ಲಿ ಮಗ್ನ.

ಕುಂಭ
ಖಾಸಗಿ ಮತ್ತು ವೃತ್ತಿ ಕ್ಷೇತ್ರದಲ್ಲಿ ಹಿತಕರ ಪರಿಸ್ಥಿತಿ. ವ್ಯವಹಾರದಲ್ಲಿ ಹಾಕಿದ ಹಣಕ್ಕೆ ಸೂಕ್ತ ಪ್ರತಿಫಲ ದೊರಕುವುದು. ಕೌಟುಂಬಿಕ ಶಾಂತಿ.

ಮೀನ
ವೃತ್ತಿಯಲ್ಲಿ ನಿಮಗೆ ಅನನುಕೂಲ  ಪರಿಸ್ಥಿತಿ.  ಕಾರ್ಯ ವಿಳಂಬ. ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಆರ್ಥಿಕ ಒತ್ತಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!