ನಾಳೆ G-20 ಸಭೆ: ಬೆಂಗಳೂರಿನ ‘ತಾಜ್ ವೆಸ್ ಎಂಡ್’ ಸುತ್ತಾ ನೋ ಫ್ಲೈಯಿಂಗ್ ಜೋನ್, ನಿಷೇಧಾಜ್ಞೆ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಆ. 16ರಂದು ಜಿ-20 ಸಭೆ ನಡೆಯಲಿದ್ದು, ಈ ಹಿನ್ನಲೆ ಹೋಟೆಲ್ ಸುತ್ತಾಮುತ್ತಾ ನೋ ಫ್ಲೈಯಿಂಗ್ ಜೋನ್ ಘೋಷಣೆ ಮಾಡಲಾಗಿದೆ. ಅಲ್ಲದೇ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಈ ಸಭೆಗೆ ದೇಶ ವಿದೇಶಗಳಿಂದ ಗಣ್ಯರು ಆಗಮಿಸಿ ಭಾಗಿಯಾಗಲಿದ್ದಾರೆ. ಈ ಹಿನ್ನಲೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದಿದೆ.

ತಾಜ್ ವೆಸ್ಟ್ ಎಂಡ್ ಹೋಟೆಲ್ ಸುತ್ತಾ ಮುತ್ತಾ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 16ರಿಂದ 20ರವರೆಗೆ ನೋ ಫ್ಲೈ ಜೋನ್ ಎಂದು ಘೋಷಿಸಲಾಗಿದೆ. ತಾಜ್ ವೆಸ್ಟ್ ಎಂಡ್ ಹೋಟೆಲ್ ನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾರಾಟ ನಿಷೇಧ ಮಾಡಲಾಗಿದೆ ಎಂದು ತಿಳಿಸಿದೆ.

ಏರ್ ಕ್ರಾಫ್ಟ್, ಡ್ರೋನ್ ಸೇರಿದಂತೆ ಯಾವುದೇ ರೀತಿಯ ಹಾರಾಟ ಮಾಡುವಂತಿಲ್ಲ. ಎಲ್ಲಾ ಹಾರಾಟಕ್ಕೂ ನಿಷೇಧವಿದೆ. ದೇಶ ವಿದೇಶಿ ಗಣ್ಯರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!