ಇಂದಿನಿಂದ ಮೈಸೂರಿನಲ್ಲಿ ಜಿ-20 ಶೃಂಗಸಭೆ, 43 ರಾಷ್ಟ್ರಗಳ ಸದಸ್ಯರು ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಂಸ್ಕೃತಿ ರಾಜಧಾನಿ ಮೈಸೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಜಿ-20 ಶೃಂಗಸಭೆ ನಡೆಯಲಿದೆ.

ಈ ಸಭೆಯಲ್ಲಿ 43 ರಾಷ್ಟ್ರಗಳ ಜಿ-20 ಸದಸ್ಯರು ಭಾಗಿಯಾಗಲಿದ್ದಾರೆ. ಇಂದಿನಿಂದ ಆ.3ರವರೆಗೆ ಸಭೆ ನಡೆಯಲಿದೆ, ಇತರೆ ದೇಶಗಳಿಂದ ಆಗಮಿಸಿದ ಗಣ್ಯರು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಮೈಸೂರು ಅರಮನೆ ಪ್ರಮುಖ ಆಕರ್ಷಣೆಯಾಗಿದ್ದು, ಇಂದು ಮೈಸೂರಿನ ಅರಮನೆ ವೀಕ್ಷಣೆಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಬರೀ ಅರಮನೆ ಅಷ್ಟೇ ಅಲ್ಲದೆ ಪ್ರೇಕ್ಷಣೀಯ ಸ್ಥಳಗಳಿಗೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು. ಹಾಗಾಗಿ ಪ್ರವಾಸಿಗರು ಮೈಸೂರು ಟ್ರಿಪ್ ಪೋಸ್ಟ್‌ಪೋನ್ ಮಾಡಿಕೊಳ್ಳುವುದು ಒಳ್ಳೆಯದು.

ಇನ್ನು ಸದಸ್ಯರು ತಂಗಿರುವ ಹೊಟೇಲ್ ಸುತ್ತಮುತ್ತ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!