September 30, 2026
Wednesday, September 30, 2026
spot_img

18 ದಿನಗಳಿಂದ ನಾಪತ್ತೆಯಾಗಿದ್ದ ಗದಗದ KRIDL ಎಂಜಿನಿಯರ್‌: ಭೋಪಾಲ್‌ನಲ್ಲಿ ಸಿಸಿಟಿವಿಯಲ್ಲಿ ಪತ್ತೆ

ಹೊಸದಿಗಂತ ವರದಿ ಗದಗ:

ಗದಗದ KRIDL ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಪರ್ವೇಜ್ ಧಾರವಾಡ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ನಾಪತ್ತೆಯಾಗಿ 18 ದಿನ ಕಳೆದರೂ ಅಧಿಕಾರಿಯ ಪತ್ತೆಯಾಗಿಲ್ಲ. ಆದರೆ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಅವರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ತನಿಖೆಗೆ ಮಹತ್ವದ ಸುಳಿವು ನೀಡಿದೆ. ಪರ್ವೇಜ್ ಗದಗದಿಂದ ಬೆಂಗಳೂರಿಗೆ, ಅಲ್ಲಿಂದ ಆಂಧ್ರಪ್ರದೇಶದ ವಿಜಯವಾಡ ಹಾಗೂ ಬಳಿಕ ಮಧ್ಯಪ್ರದೇಶದ ಭೋಪಾಲ್‌ಗೆ ಪ್ರಯಾಣಿಸಿರುವ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.

ಸುಮಾರು 1200 ಕಿಲೋಮೀಟರ್‌ಗೂ ಹೆಚ್ಚು ದೂರ ಪ್ರಯಾಣಿಸಿರುವ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ವಿಜಯವಾಡದ ಬಳಿಕ ಪರ್ವೇಜ್ ಅವರ ಮೊಬೈಲ್ ಲೋಕೇಷನ್ ಸ್ಥಗಿತಗೊಂಡಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿರುವುದರಿಂದ ಪತ್ತೆ ಕಾರ್ಯಕ್ಕೆ ಸವಾಲಾಗಿದೆ. ಈ ನಡುವೆ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯದಲ್ಲಿ ಅವರ ಚಲನವಲನ ಪತ್ತೆಯಾಗಿದ್ದು, ಅಲ್ಲಿಂದಲೂ ಅವರು ಮತ್ತೊಂದು ಸ್ಥಳಕ್ಕೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಅಧಿಕಾರಿಯ ಪ್ರತಿಯೊಂದು ಚಲನವಲನದ ಮೇಲೂ ಗದಗ ಪೊಲೀಸರು ನಿಗಾ ಇರಿಸಿದ್ದು, ಭೋಪಾಲ್ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ನಾಪತ್ತೆಯಾದ ಅಧಿಕಾರಿಯನ್ನು ಪತ್ತೆಹಚ್ಚಲು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Must Read