ಬಾಲಿವುಡ್ ನಲ್ಲಿ ‘ಗದರ್​ 2 ಸದ್ದು: 400 ಕೋಟಿ ಗಡಿಯಲ್ಲಿ ಸನ್ನಿ ಡಿಯೋಲ್​ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸಿನಿಮಾ ‘ಗದರ್​ 2’ . ಬಾಕ್ಸ್​ ಆಫೀಸ್​ನಲ್ಲಿಈಗಾಗಲೇ ಮೋಡಿಮಾಡುತ್ತಿದ್ದು, ದೊಡ್ಡ ಮೊತ್ತದ ಕಲೆಕ್ಷನ್​ ಮಾಡುತ್ತಿದೆ.

ಬಿಡುಗಡೆಯಾಗಿ 11 ದಿನ ಕಳೆದರೂ ಈ ಚಿತ್ರದ ಆರ್ಭಟ ಕಡಿಮೆ ಆಗಿಲ್ಲ. ಬಾಲಿವುಡ್​ನ ಖ್ಯಾತ ನಟ ಸನ್ನಿ ಡಿಯೋಲ್​ (Sunny Deol) ಅವರು ಈ ಸಿನಿಮಾದ ಗೆಲುವಿನಿಂದ ಮತ್ತೆ ಟ್ರ್ಯಾಕ್​ಗೆ ಮರಳಿದ್ದಾರೆ.

ಶೀಘ್ರದಲ್ಲೇ ‘ಗದರ್​ 2’ ಸಿನಿಮಾ 400 ಕೋಟಿ ರೂಪಾಯಿ ಗಡಿ ಮುಟ್ಟಲಿದೆ. ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ (Ameesha Patel) ಅವರು ಸದ್ಯಕ್ಕೆ ಸೆಲೆಬ್ರೇಷನ್​ ಮೂಡ್​ನಲ್ಲಿ ಇದ್ದಾರೆ. ಚಿತ್ರತಂಡದವರೆಲ್ಲರೂ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ.

‘ಗದರ್​ 2’ ಸಿನಿಮಾಗೆ ಅನಿಲ್​ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಸನ್ನಿ ಡಿಯೋಲ್​ ಅವರಿಗೆ ಜೋಡಿಯಾಗಿ ಅಮೀಷಾ ಪಟೇಲ್​ ನಟಿಸಿದ್ದಾರೆ. ಅಮೀಷಾ ಪಟೇಲ್​ ಕೂಡ ಬಹಳ ವರ್ಷದ ಬಳಿಕ ಈ ರೀತಿಯ ಸಕ್ಸಸ್​ ಪಡೆದಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಆ ಕಾರಣದಿಂದ ಇತ್ತೀಚೆಗೆ ದುಬೈಗೆ ತೆರಳಿ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ಸಂಭ್ರಮಿಸಿದ್ದರು.

ಆಗಸ್ಟ್​ 11ರಿಂದ ಆಗಸ್ಟ್​ 20ರವರೆಗೆ ‘ಗದರ್​ 2’ ಸಿನಿಮಾ ಮಾಡಿದ ಒಟ್ಟು ಕಲೆಕ್ಷನ್​ 375 ಕೋಟಿ ರೂಪಾಯಿ. ಈ ಸಿನಿಮಾ ಪ್ರತಿ ದಿನವೂ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡುತ್ತಿದೆ. 400 ಕೋಟಿ ರೂಪಾಯಿ ಗಡಿ ಮುಟ್ಟಲು ಇನ್ನು 25 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಮಂಗಳವಾರದ (ಆಗಸ್ಟ್​ 22) ವೇಳೆಗೆ ಈ ಸಿನಿಮಾ 400 ಕೋಟಿ ರೂಪಾಯಿ ಕ್ಲಬ್​ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here