ಹೊಸದಿಗಂತ ಡಿಜಿಟಲ್ ಡೆಸ್ಕ್ :
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದಿದೆ.
ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (57 ರನ್, 31 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಫೋಟಕ ಅರ್ಧಶತಕ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ವಿಕೆಟ್‌ಗೆ 217 ರನ್ ಪೇರಿಸಿದೆ.
ಚೆನ್ನೈ ರುತುರಾಜ್ ಗಾಯಕ್ವಾಡ್ ಕೇವಲ 25 ಎಸೆತಗಳಲ್ಲಿ ಅಬ್ಬರದ ಅರ್ಧಶತಕ ಬಾರಿಸಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಡೆವೋನ್ ಕಾನ್ವೆ 29 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್‌ಗಳಿದ್ದ 47 ರನ್ ಸಿಡಿಸಿದರು.
ಈ ವೇಳೆ ದಾಳಿಗಿಳಿದ ರವಿ ಬಿಷ್ಣೋಯ್ ತಮ್ಮ ಮೊದಲ ಎಸೆತದಲ್ಲಿಯೇ ರುತುರಾಜ್ ಗಾಯಕ್ವಾಡ್ ವಿಕೆಟ್ ಉರುಳಿಸಿದರು. ನಂತರದ ಓವರ್‌ನಲ್ಲಿ ಡೆನೋವ್ ಕಾನ್ವೆ, ಕೃನಾಲ್ ಪಾಂಡ್ಯ ಹಿಡಿದ ಅತ್ಯಾಕರ್ಷಕ ಕ್ಯಾಚ್‌ನ ಕಾರಣದಿಮದ ಮಾರ್ಕ್‌ವುಡ್‌ಗೆ ವಿಕೆಟ್ ನೀಡಿದರು. ಆ ನಂತರ ಭಡ್ತಿ ಪಡೆದು ಬಂದು ಆಡಿದ ಶಿವಂ ದುಬೆ, ಆರಂಭದಲ್ಲಿ ಬ್ಯಾಟಿಂಗ್ ಮಾಡಲು ಒದ್ದಾಟ ನಡೆಸಿದರೂ, ಔಟಾಗುವ ಮುನ್ನ ಎದುರಿಸಿದ ನಾಲ್ಕು ಎಸೆತಗಳಲ್ಲಿ 22 ರನ್ ಸಿಡಿಸುವ ಮೂಲಕ ಗಮನಸೆಳೆದರು.
ಕೊನೆಯ ಐದು ಎಸೆತಗಳಿರುವಾಗ ಮೈದಾನಕ್ಕೆ ಇಳಿದ ಚೆನ್ನೈ ನಾಯಕ ಎಂಎಸ್ ಧೋನಿ, ಮಾರ್ಕ್‌ವುಡ್‌ನ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ಅಭಿಮಾನಿಗಳನ್ನು ರಂಜಿಸಿದರು. ಎಂಎಸ್ ಧೋನಿ ಐಪಿಎಲ್‌ನಲ್ಲಿ ತಮ್ಮ 5 ಸಾವಿರ ರನ್ ಅನ್ನೂ ಪೂರೈಸಿದರು. ಮೂರನೇ ಎಸೆತವನ್ನು ಸಿಕ್ಸರ್‌ಗಟ್ಟುವ ಪ್ರಯತ್ನ ಮಾಡಿದ ಧೋನಿ, ರವಿ ಬಿಷ್ಣೋಯಿಗೆ ಕ್ಯಾಚ್ ನೀಡಿ ಹೊರನಡೆದರು,