ಹೊಸದಿಗಂತ ವರದಿ, ಶಿರಸಿ:
ಪುಟ್ಟನಮನೆಯಲ್ಲಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಜುಗಾರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ಅವರ ನೇತೃತ್ವದ ತಂಡ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ನಗದು ಮತ್ತು ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಒಟ್ಟು 11 ಜನರ ಮೇಲೆ ಪ್ರಕರಣ ದಾಖಲಾಗಿದ್ದು 7 ಜನರನ್ನು ಬಂಧಿಸಲಾಗಿದೆ 4 ಜನರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಶಿರಶಿ ಪುಟ್ಟನಮನೆ ನಿವಾಸಿ ಆದರ್ಶ ರಾಘವ ಭಟ್ಟ (36),ಯಲ್ಲಾಪುರ ಉಮ್ಮಚಗಿ ನಿವಾಸಿ ಸುರೇಶ ಶ್ರೀಪಾದ ಹೆಗಡೆ (39) ಶಿರಶಿ ಹುಣಸೇಕೊಪ್ಪ ನಿವಾಸಿ ಮಹಾಬಲ ತಿಮ್ಮ ಗೌಡ(60) ಸೊರಬ ನಿವಾಸಿಗಳಾದ ಕಿರಣಕುಮಾರ ಭಟ್ಟ(43) ಮಹಾಬಲೇಶ್ವರ ಹೆಗಡೆ (50) ಗೋಪಾಲ ಪೂಜಾರಿ (58) ಗುರುರಾಜ ಕೋಡಿಯಾ (57) ಬಂಧಿತ ಆರೋಪಿಯಾಗಿದ್ದು ಶಿರಶಿ ಬೆಂಡೆಗದ್ದೆಯ ಗಂಗಾಧರ (40)
ಶ್ರೀಹರ್ಷ (35) ಯಲ್ಲಾಪುರ ಮಂಚಿಕೇರಿಯ ವಿಜಯ (36) ಮತ್ತು ಶಿರಶಿ ಹುಸರಿಯ ಕೃಷ್ಣಮೂರ್ತಿ (32) ತಲೆ ಮರೆಸಿಕೊಂಡಿದ್ಧಾರೆ.
ಬಂಧಿತರಿಂದ ಸುಮಾರು 1.50 ಲಕ್ಷ ನಗದು ಹಣ, ಇಸ್ಪೀಟ್ ಎಲೆಗಳು,
2.50 ಲಕ್ಷ ಮೌಲ್ಯದ ಮಾರುತಿ ಸ್ವಿಪ್ಟ್ ವಾಹನ ಮತ್ತು 3 ಲಕ್ಷ ರೂಪಾಯಿ ಮೌಲ್ಯದ ಮಹಿಂದ್ರ ಬೊಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಶಿರಸಿ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.