ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಮ್ ಚರಣ್ ಅಭಿನಯಿಸಿರುವ ಗೇಮ್ ಚೇಂಜರ್ ಸಿನಿಮಾ ಹಾಡು ಲೀಕ್ ಮಾಡಿದ್ದ ಇಬ್ಬರು ಖದೀಮರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಗೇಮ್ ಚೇಂಜರ್ ಚಿತ್ರದ ಹಾಡೊಂದು ಈ ಹಿಂದೆ ಸೋರಿಕೆಯಾಗಿತ್ತು. ಆ ವೇಳೆ ಸಾಂಗ್ ಲೀಕ್ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸೋರಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 66 ಸಿ, 66 ಆರ್/ಡಬ್ಲ್ಯೂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೆನ್ಸೇಷನಲ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ರಾಮ್ ಚರಣ್ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ‘ಗೇಮ್ ಚೇಂಜರ್’ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ. ಅದ್ಧೂರಿ ಬಜೆಟ್‌ನಲ್ಲಿ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಷ್ ಅವರು ಗೇಮ್ ಚೇಂಜರ್ ಅನ್ನು ನಿರ್ಮಿಸುತ್ತಿದ್ದಾರೆ. ಆರ್‌ಆರ್‌ಆರ್‌ನಂತಹ ಸೆನ್ಸೇಷನಲ್ ಬ್ಲಾಕ್‌ಬಸ್ಟರ್ ಚಿತ್ರದ ನಂತರ ರಾಮ್ ಚರಣ್ ಅವರ ಮುಂದಿನ ಚಿತ್ರ ‘ಗೇಮ್ ಚೇಂಜರ್’ ಭಾರಿ ನಿರೀಕ್ಷೆಗಳನ್ನು ಹೊಂದಿದೆ.
ಮೊದಲ ಬಾರಿಗೆ ಗೇಮ್ ಚೇಂಜರ್ ಚಿತ್ರದ ಹಾಡನ್ನು ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ದೀಪಾವಳಿಯಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.