ಹೊಸದಿಗಂತ ಡಿಜಿಟಲ್ ಡೆಸ್ಕ್ :
ನಿರಂತರ ಭಾರೀ ಮಳೆಯಿಂದಾಗಿ ಉತ್ತರಾಖಂಡದ ಪವಿತ್ರ ಧಾರ್ಮಿಕ ಕ್ಷೇತ್ರ ಋಷಿಕೇಶದಲ್ಲಿ ಗಂಗಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಪರಮಾರ್ಥ ನಿಕೇತನ ಆಶ್ರಮದ ಆರತಿ ಸ್ಥಳದಲ್ಲಿರುವ ಶಿವನ ವಿಗ್ರಹ ಮುಳುಗಡೆಯ ಭೀತಿಯಲ್ಲಿದೆ.
ಉತ್ತರ ಕಾಶಿಯಲ್ಲಿ ಮಂಗಳವಾರ ಸಂಭವಿಸಿದ ಮೇಘಸ್ಫೋಟದಿಂದಾಗಿ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಿದೆ. ಸುರಕ್ಷತಾ ಕಾರಣಗಳಿಂದ ನದಿ ದಡದ ಬಳಿ ಜನರಿಗೆ ಪ್ರವೇಶ ನೀಡುತ್ತಿಲ್ಲ. ಘಾಟ್‌ಗಳ ಎಲ್ಲಾ ಪ್ರವೇಶದ್ವಾರಗಳಿಗೆ ಬೀಗ ಹಾಕಲಾಗಿದೆ.
ಪರಮಾರ್ಥದಲ್ಲಿ ಗಂಗಾನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಶಿವನ ವಿಗ್ರಹವೂ ಮುಳುಗಲು ಪ್ರಾರಂಭಿಸಿದೆ. ನಿನ್ನೆ ಉತ್ತರಕಾಶಿಯಲ್ಲಿ ಸಂಭವಿಸಿದ ಮೇಘ ಸ್ಪೋಟದಿಂದಾಗಿ ಇಲ್ಲಿ ನೀರಿನ ಮಟ್ಟದಲ್ಲಿ ಅಪಾಯಕಾರಿಯಾಗಿ ಹೆಚ್ಚಾಗಿದೆ.
#WATCH | Rishikesh, Uttarakhand: At the Aarti Sthal of the Parmarth Niketan Ashram in Rishikesh, River Ganga touches the idol of Lord Shiva. pic.twitter.com/DB2y83mCDD
— ANI (@ANI) August 6, 2025