ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಚಲನಚಿತ್ರ ಕಪ್ ಚಾಂಪಿಯನ್ಸ್ ಆಗಿ ಗಂಗಾ ವಾರಿಯರ್ಸ್ ಹೊರಹೊಮ್ಮಿದ್ದಾರೆ.
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಟೀಂ ಟ್ರೋಫಿಗೆ ಮುತ್ತಿಕ್ಕಿದ್ದು, ಗಂಗಾ ವಾರಿಯರ್ಸ್ ತಂಡ ಮೂರು ರನ್ಗಳಿಂದ ಗೆಲುವು ಸಾಧಿಸಿದೆ. ಶಿವಣ್ಣ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಎದುರು ಗಂಗಾ ವಾರಿಯರ್ಸ್ ಗೆಲುವು ಸಾಧಿಸಿ ಬೀಗಿದೆ.
ಗಂಗಾ ವಾರಿಯರ್ಸ್ ತಂಡ 112 ರನ್ಗಳ ಗುರಿ ನೀಡಿತ್ತು. ಶಿವಣ್ಣ ತಂಡ ಈ ಗುರಿ ತಲುಪಲಾಗದೆ ರನ್ನರ್ಸ್ ಪಟ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು.