ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನಲ್ಲಿ ತೀವ್ರ ಮಳೆ ಸುರಿಯುತ್ತಿದ್ದು ಗಂಗಾವಳಿ ನದಿಗೆ ನೆರೆ ಕಾಣಿಸಿಕೊಂಡಿದೆ.
ನದಿಪಾತ್ರನೀರಿನ ಹರಿವು ಹೆಚ್ಚಿಗೆ ಆಗಿರುವುದರಿಂದ, ಅಂಕೋಲಾ ತಾಲೂಕಿನ ಬಾಸಗೋಡ ಹೋಬಳಿಯ ಬಿಳಿಹೋಯ್ಗಿ, ಶಿಂಗನಮಕ್ಕಿ, ಹಡವ ಗ್ರಾಮದಲ್ಲಿ 35 ಮನೆಗಳು ಜಲಾವೃತಗೊಂಡಿದ್ದು ಜನ ಕಂಗೆಟ್ಟಿದ್ದಾರೆ ನೆರೆ ಪೀಡಿತ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಜಲಾವೃತವಾದ ಮನೆಗಳ ಜನರನ್ನು ಅಲ್ಲಿಂದ ಹೊರ ತರಲಾಗಿದೆ. 3 ಕಾಳಜಿ ಕೇಂದ್ರಗಳನ್ನು ತೆರೆದು ನೆರೆಪೀಡಿತರನ್ನು ಕೇಂದ್ರ ಕ್ಕೆ ಸ್ಥಳಾ0ತರ ಮಾಡಿ, ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ.
ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು ನದಿ ಪಾತ್ರದ ಕೆಲ ಹಳ್ಳಿಗಳಲ್ಲಿ ನೆರೆಯ ಭೀತಿ ಕಾಣಿಸಿಕೊಂಡಿದೆ.