January21, 2026
Wednesday, January 21, 2026
spot_img

ಬಿಷ್ಣೋಯ್ ಗ್ಯಾಂಗ್ ಜೊತೆ ನಂಟು: ದರೋಡೆಕೋರ ಲಖ್ವಿಂದರ್ ಅಮೆರಿಕದಿಂದ ಗಡಿಪಾರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ.

ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ಮೇಲಿದ್ದು, ಆತ ಹರಿಯಾಣ ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದನು.

ಈ ಕಾರಣಕ್ಕೆ ಅಲ್ಲಿಂದ ಗಡಿಪಾರಾದ ಬಳಿಕ ದೆಹಲಿಗೆ ಆಗಮಿಸಿದ ಆತನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ತನಿಖಾ ದಳ (ಸಿಬಿಐ), ವಿದೇಶಾಂಗ ಸಚಿವಾಲಯ (ಎಂಇಎ) ಮತ್ತು ಗೃಹ ಸಚಿವಾಲಯ (ಎಂಎಚ್‌ಎ) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಶನಿವಾರ ಅಮೆರಿಕದಿಂದ ಗಡಿಪಾರು ಮಾಡಲಾಗಿತ್ತು.

ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ಲಖ್ವಿಂದರ್ ಕುರಿತಾಗಿ ಹರಿಯಾಣ ಪೊಲೀಸರ ಕೋರಿಕೆಯ ಮೇರೆಗೆ ಸಿಬಿಐ ಕಳೆದ ವರ್ಷ ಅಕ್ಟೋಬರ್ 26 ರಂದು ಇಂಟರ್‌ಪೋಲ್ ಮೂಲಕ ಪರಾರಿಯಾಗಿರುವ ಆತನ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು.

ಅಮೆರಿಕದಿಂದ ಗಡೀಪಾರು ಮಾಡಿದ ಬಳಿಕ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆತನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದರು. ಕಳೆದ ಕೆಲವು ವರ್ಷಗಳಲ್ಲಿ ಇಂಟರ್‌ಪೋಲ್ ಚಾನೆಲ್‌ಗಳ ಸಮನ್ವಯದ ಮೂಲಕ 130 ಕ್ಕೂ ಹೆಚ್ಚು ವಾಂಟೆಡ್ ಕ್ರಿಮಿನಲ್‌ಗಳನ್ನು ಮರಳಿ ಕರೆತರಲಾಗಿದೆ.

.

Must Read