ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ನಿಮ್ಮ ಕೈತೋಟದಲ್ಲಿರೋ ಸಸ್ಯಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸುವುದು ಅನಿವಾರ್ಯ. ನಿರಂತರವಾದ ಮಳೆಯು ಗಿಡಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಮಣ್ಣಿನಿಂದ ತೊಳೆದುಹಾಕುವುದಷ್ಟೇ ಅಲ್ಲ, ಕೆಲವು ಸಂದರ್ಭಗಳಲ್ಲಿ ಸಸ್ಯಗಳ ಬೇರುಗಳು ಕೊಳೆಯುವ ಸ್ಥಿತಿಗೂ ತಲುಪಬಹುದು.
ನೀರು ನಿಲ್ಲದಂತೆ ನೋಡಿಕೊಳ್ಳಿ
ಮನೆಯ ಬಳಿಯ ತೋಟ ಅಥವಾ ಮಳೆಗಾಲಕ್ಕೆ ಹೆಚ್ಚು ಹೊಂದಾಣಿಕೆಯ ಬೇಸಾಯದಲ್ಲಿ ಮಣ್ಣಿನ ಒಳಚರಂಡಿಯನ್ನು ಸರಿಯಾಗಿಡುವುದು ಅತ್ಯವಶ್ಯಕ. ಮಣ್ಣಿನಲ್ಲಿ ನೀರು ಜಮೆಯಾಗದಂತೆ ಕಾಂಪೋಸ್ಟ್ ಅಥವಾ ಹಳೆಯ ಗೊಬ್ಬರವನ್ನು ಬಳಸಿದರೆ ನೀರಿನ ಹರಿವಿಗೆ ಸುಲಭವಾಗುತ್ತದೆ.
ಮಲ್ಚಿಂಗ್ ಸರಿಯಾಗಿರಲಿ
ಇದೇ ವೇಳೆ ಮಲ್ಚಿಂಗ್ ವಿಧಾನ ಕೂಡ ಸಹಾಯಕವಾಗುತ್ತದೆ. ಸಾವಯವ ಮಲ್ಚ್ ಬಳಸಿ ಗಿಡದ ಸುತ್ತ 1-2 ಇಂಚಿನ ಪದರವನ್ನು ಹಾಕುವುದು ಮಣ್ಣಿನ ಸವೆತವನ್ನು ತಡೆಯುತ್ತದೆ. ಭಾರಿ ಮಳೆಯ ಮಧ್ಯೆ ಗಿಡಗಳ ಮೇಲೆ ನೇರವಾಗಿ ಮಳೆ ಬೀಳದಂತೆ ತಡೆಗಟ್ಟಲು ಗಿಡದ ಕವರ್ ಅಥವಾ ಪ್ಲಾಸ್ಟಿಕ್ ಶೀಟ್ ಬಳಕೆ ಸೂಕ್ತವಾಗಿದೆ.
ಮಳೆಗಾಲದಲ್ಲಿ ಒಂದೇ ತರಹದ ನೀರಿನ ಅಗತ್ಯವಿರುವ ಸಸ್ಯಗಳನ್ನು ಒಂದೆಡೆ ನೆಡುವುದರಿಂದ ನಿರ್ವಹಣೆ ಸುಲಭವಾಗುತ್ತದೆ. ಈ ಮೂಲಕ ಗಿಡಗಳಿಗೆ ಅಗತ್ಯವಿರುವ ಜಲಸಂಪತ್ತು ಸಮರ್ಪಕವಾಗಿ ಪೂರೈಸಬಹುದು.
ಸಸ್ಯಗಳ ಆರೋಗ್ಯ ನಿರ್ವಹಣೆ ಬಹುಮುಖ್ಯ. ಸತ್ತ ಅಥವಾ ರೋಗಗ್ರಸ್ತ ಎಲೆ-ಕಾಂಡಗಳನ್ನು ಕತ್ತರಿಸಿ ಹಾಕುವುದು, ಗಾಳಿ ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ. ಜೊತೆಗೆ ಗಿಡಗಳಿಗೆ ಸಮತೋಲ ಪೋಷಕಾಂಶ ನೀಡುವುದು, ಆದರೆ ಅತಿಯಾದ ಗೊಬ್ಬರ ನೀಡುವುದು ತಪ್ಪು ಎನ್ನುವುದನ್ನು ಮನದಲ್ಲಿರಿಸಬೇಕು.
ನಿರಂತರ ಪರಿಶೀಲನೆ
ಮಳೆಗಾಲದ ವೇಳೆ ನಿಮ್ಮ ತೋಟದ ನಿರಂತರ ಪರಿಶೀಲನೆ ಅಗತ್ಯ. ನೀರಿನ ಒತ್ತಡದಿಂದಾಗಿ ಎಲೆಗಳು ಹಳದಿಯಾಗುತ್ತಿವೆಯೇ, ಅಥವಾ ಚರಂಡಿಗಳು ಜಾಮ್ ಆಗಿರುವವೆಯೇ ಎಂಬುದನ್ನು ಗಮನಿಸಿ ತಕ್ಷಣ ಕ್ರಮ ತೆಗೆದುಕೊಳ್ಳುವುದು ಸೂಕ್ತ.