ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಟ್ಟಿದ ಮಗು ಸಾವನ್ನಪ್ಪಿದೆ ಎಂಬ ಕಾರಣಕ್ಕೆ ಹಸುಳೆಯನ್ನು ಬೆಂಕಿಗೆಸೆದಿರುವ ದುರಂತ ಘಟನೆ ಜಾರ್ಖಂಡ್ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ. ಹೆರಿಗೆ ನೋವಿನಿಂದಾಗಿ ಮಹಿಳೆಯೊಬ್ಬರನ್ನು ಮಜಿಯಾನ್ ಸಿಎಚ್ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತ್ತ ಮಗುವಿಗೆ ಜನ್ಮ ನೀಡಿದ್ದಾಗಿ ಸಿಬ್ಬಂದಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಕುಟುಂಬದವರು ಮಗುವಿನ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿ ಶವ ಕೊಡಿ ಎಂದು ಕೇಳಿದಾಗ ಸಿಬ್ಬಂದಿ ಹೇಳಿದ ಮಾತು ಕೇಳಿ ಬೆಚ್ಚಿಬಿದ್ದಿದ್ದಾರೆ.
ವಾಸ್ತವವಾಗಿ, ಮಗುವಿನ ದೇಹವನ್ನು ಆಸ್ಪತ್ರೆಯ ಆವರಣದಲ್ಲಿ ಸುಡುವ ಕಸದಲ್ಲಿ ಎಸೆಯಲಾಯಿತು ಎಂದಿದ್ದಾರೆ. ಇದನ್ನು ಕೇಳಿದ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು. ಮಾಹಿತಿ ಬಂದ ತಕ್ಷಣ ಎಸ್ಡಿಎಂ ಆದೇಶದಂತೆ ಪೊಲೀಸ್ ಇನ್ಸ್ಪೆಕ್ಟರ್ ರಾಜೀವ್ ಕುಮಾರ್ ಮತ್ತು ಠಾಣಾಧಿಕಾರಿ ಕಮಲೇಶ್ ಕುಮಾರ್ ಮಹತೋ ಅವರು ಮಹಿಳಾ ಪೊಲೀಸರೊಂದಿಗೆ ಆಸ್ಪತ್ರೆಗೆ ತಲುಪಿದರು. ಎಎನ್ ಎಂ ಮಂಜು ಕುಮಾರಿ, ನಿರ್ಮಲಾ ಕುಮಾರಿ ಹಾಗೂ ಸೂಲಗಿತ್ತಿ ದೌಲತ್ ಕುನ್ವರ್ ಬಂಧಿಸಿ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪಲಮು ಜಿಲ್ಲೆಯ ರಾಜಹಾರದ ಲಾಲಾಹೆ ಗ್ರಾಮದ ಮಂದೀಪ್ ವಿಶ್ವರ್ಮಾ ಅವರ ಪತ್ನಿಗೆ ಇದ್ದಕ್ಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಸಿಎಚ್ಸಿ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಹೆರಿಗೆ ವೇಳೆ ಮಹಿಳೆ ಸತ್ತ ಮಗುವಿಗೆ ಜನ್ಮ ನೀಡಿದ್ದಾಳೆಂದು ಕುಟುಂಬಸ್ಥರಿಗೆ ತಿಳಿಸಿದರು. ಈ ವಿಷಯ ತಿಳಿದ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಮಗುವನ್ನು ಕಸ ವಿಲೇವಾರಿ ಮಾಡುವ ಆಳವಾದ ತೊಟ್ಟಿಯಲ್ಲಿ ಸುಡುವ ಕಸಕ್ಕೆ ಎಸೆಯಲಾಯಿತು ಎಂದು ತಿಳಿಸಿದ್ದಾರೆ. ಆಸ್ಪತ್ರೆಯವರು ನಿರ್ಲಕ್ಷ್ಯದಿಂದ ಮಗುವನ್ನು ಬೆಂಕಿಗೆ ಎಸೆದಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ನಾಚಿಕೆಗೇಡಿನ ಕೃತ್ಯಕ್ಕೆ ಇಡೀ ಆಸ್ಪತ್ರೆಯಲ್ಲಿ ದೊಡ್ಡ ಕೋಲಾಹಲ ಎದ್ದಿದೆ.