ಮೈಕ್ರೋಸಾಫ್ಟ್‌ ನಿಂದ ಮತ್ತೆ ಉದ್ಯೋಗಿಗಳಿಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಕ್ರೋಸಾಫ್ಟ್‌ ಇತ್ತೀಚೆಗೆ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ನಡೆಸುತ್ತಿದ್ದು, ಕಳೆದ ಜನವರಿ 2023 ರಲ್ಲಿ 10,000 ಉದ್ಯೋಗ ಕಡಿತ ಮಾಡಿತ್ತು. ಜೊತೆಗೆ ವೇತನ ಹೆಚ್ಚಳವನ್ನು ಸ್ಥಗಿತಗೊಳಿಸಿತ್ತು. ಇದೀಗ ಈ ಹಣಕಾಸು ವರ್ಷದಲ್ಲಿ ಮೈಕ್ರೋಸಾಫ್ಟ್‌ ಉದ್ಯೋಗ ಕಡಿತಕ್ಕೆ ಮತ್ತೆ 275 ಉದ್ಯೋಗ ಕಡಿತವನ್ನು ಸೇರ್ಪಡೆ ಮಾಡುತ್ತಿದೆ.

ಈ ಬಗ್ಗೆ ಲಿಂಕ್ಡ್‌ಇನ್‌ ನಲ್ಲಿ ಕೆಲಸ ಕಳೆದುಕೊಂಡ ಉದ್ಯೋಗಿಗಳು ಬರೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ವಿರುದ್ಧವೂ ಉದ್ಯೋಗ ಕಳೆದುಕೊಂಡವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ದೊಡ್ಡ ಟೆಕ್ ಕಂಪನಿಯು ತನ್ನ 2024 ರ ಆರ್ಥಿಕ ವರ್ಷ ಪ್ರಾರಂಭವಾದ ಕೇವಲ ಒಂದು ವಾರದ ನಂತರ ತನ್ನ ಉದ್ಯೋಗಿಗಳನ್ನು ಕಡಿತ ಮಾಡುವುದು ಅಸಾಮಾನ್ಯವಾಗಿದೆ. ಇವೆಲ್ಲದರ ನಡುವೆ ಮಾಜಿ ಮೈಕ್ರೋಸಾಫ್ಟ್ ಉದ್ಯೋಗಿಗಳು ಹೊಸ ಉದ್ಯೋಗಗಳನ್ನು ಹುಡುಕಲು ಲಿಂಕ್ಡ್‌ಇನ್‌ ಮೊರೆ ಹೋಗುತ್ತಿದ್ದಾರೆ. ಉದ್ಯೋಗದ ಆಕಾಂಕ್ಷಿಯಾಗಿರುವ ವ್ಯಕ್ತಿಯೊಬ್ಬರು ಲಿಂಕ್ಡ್‌ಇನ್‌ ನಲ್ಲಿ, ನಿಮ್ಮಲ್ಲಿ ಅನೇಕರು ಕೇಳಿರಬಹುದು, ಮೈಕ್ರೋಸಾಫ್ಟ್ ಇತ್ತೀಚೆಗೆ ಹಲವಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಂದು ಸುತ್ತಿನ ವಜಾ ಘೋಷಿಸಿತು. ಈ ಸುದ್ದಿ ನೇರವಾಗಿ ಪರಿಣಾಮ ಬೀರುವವರಿಗೆ ನಿರಾಶಾದಾಯಕವಾಗಿದ್ದರೂ, ಇದು ನನ್ನ ಬೆಳವಣಿಗೆಗೆ ಅವಕಾಶವನ್ನು ಒದಗಿಸುತ್ತದೆ. ಬದಲಾವಣೆಯು ನಮ್ಮ ವೃತ್ತಿಪರ ಜೀವನದ ಅನಿವಾರ್ಯ ಭಾಗವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕೋವಿಡ್-19 ಬಳಿಕ ಮೈಕ್ರೋಸಾಫ್ಟ್ ಜೊತೆಗೆ, ಅಮೆಜಾನ್, ಮೆಟಾ ಮತ್ತು ಗೂಗಲ್‌ನಂತಹ ಇತರ ಪ್ರಮುಖ ತಂತ್ರಜ್ಞಾನ ದೈತ್ಯರು ಸಹ ಈ ವರ್ಷ ತಮ್ಮ ಉದ್ಯೋಗಿಗಳನ್ನು ತೆಗೆದು ಹಾಕಿತ್ತು. ಜನವರಿಯಲ್ಲಿ ಮೈಕ್ರೋಸಾಫ್ಟ್ 10,000 ಉದ್ಯೋಗಿಗಳನ್ನು ವಜಾ ಮಾಡಿದಾಗ, ಒಟ್ಟು ಶೇಕಡಾ 5 ರಷ್ಟು ಕೊರತೆ ಕಂಡಿತ್ತು. ಮೈಕ್ರೋಸಾಫ್ಟ್‌ನ ಸಿಇಒ ಸತ್ಯ ನಾಡೆಲ್ಲಾ ಕಂಪನಿಯು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವಾಗ, ಇನ್ನೂ ಹೆಚ್ಚಿನವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದ್ದರು. ಆದರೆ ಮತ್ತೆ ಈಗ ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here