ಏಪ್ರಿಲ್‌ 1 ರಿಂದ 9 ಲಕ್ಷ ಸರ್ಕಾರಿ ವಾಹನಗಳಿಗೆ ಗೇಟ್‌ಪಾಸ್: ನಿತಿನ್ ಗಡ್ಕರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

15  ವರ್ಷಕ್ಕಿಂತ ಹಳೆಯದಾದ 9  ಲಕ್ಷ ಸರ್ಕಾರಿ ವಾಹನಗಳನ್ನು ಏ.1 ರಿಂದ ಗುಜರಿಗೆ ಹಾಕಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಹಳೆ ವಾಹನಗಳ ಬದಲಾಗಿ ಹೊಸ ವಾಹನಗಳ ಬಳಕೆ ಮಾಡಲಾಗುವುದು, ಇದರಿಂದ ಮಾಲೀನ್ಯಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ವಲಯಗಳ ಸಾರಿಗೆ ನಿಗಮಗಳ ಸ್ವಾಮ್ಯದ 15 ವರ್ಷ ಮೇಲ್ಪಟ್ಟ ಒಟ್ಟಾರೆ 9 ಲಕ್ಷಕ್ಕೂ ಅಧಿಕ ವಾಹನಗಳನ್ನು ರದ್ದುಗೊಳಿಸಿ ಗುಜರಿಗೆ ಹಾಕಲು ಅನುಮೋದನೆ ನೀಡಲಾಗಿದೆ.

ಏಪ್ರಿಲ್‌ನಲ್ಲಿಯೇ ಅವುಗಳ ಸ್ಥಾನಕ್ಕೆ ನೂತನ ವಾಹನಗಳು ಬರಲಿವೆ. ಇದರಿಂದಾಗಿ ವಾಯುಮಾಲಿನ್ಯ ಕಡಿಮೆಯಾಗುತ್ತದೆ ಎಂದಿದ್ದಾರೆ. ದೇಶದ ರಕ್ಷಣೆ, ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಶಸ್ತ್ರಸಜ್ಜಿತ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!