ಗೌತಮ್ ಗಂಭೀರ್ ಟೀಮ್​ ಇಂಡಿಯಾ ಕೋಚ್​ ಆಗುವುದು ಪಕ್ಕಾ: ಶೀಘ್ರದಲ್ಲೇ ಅಧಿಕೃತ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೌತಮ್ ಗಂಭೀರ್ ಅವರು ಟೀಮ್​ ಇಂಡಿಯಾ ಕೋಚ್​ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ಟೀಮ್​ ಇಂಡಿಯಾ ಕೋಚ್​ ಹುದ್ದೆ ಸಂಬಂಧ ನಾವು ಈಗಾಗಲೇ ಗೌತಮ್​ ಗಂಭೀರ್​ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರ ಬೇಡಿಕೆಗಳಿಗೆ ಮಂಡಳಿ ಸಮ್ಮತಿಸಿದೆ. ಟಿ20 ವಿಶ್ವಕಪ್​ ಬಳಿಕ ಅವರು ರಾಹುಲ್​ ದ್ರಾವಿಡ್​ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಗೌತಮ್​ ಗಂಭೀರ್​ ತಂಡದ ಕೋಚ್​ ಹುದ್ದೆ ಜೊತೆಗೆ ತಮಗೆ ಬೇಕಾಗಿರುವ ಸಹಾಯಕ ಸಿಬ್ಬಂದಿಯನ್ನು ನೇಮಿಸುವ ಅಧಿಕಾರವನ್ನು ತಮಗೆ ನೀಡಿದರೆ ಮಾತ್ರ ಕೋಚ್​ ಹುದ್ದೆ ಅಲಂಕರಿಸುವುದಾಗಿ ಬಿಸಿಸಿಐಗೆ ಷರತ್ತು ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಮ್ಮತಿಸಿರುವ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡುವುದನ್ನು ಬಾಕಿ ಉಳಿಸಿಕೊಂಡಿದೆ. ಟಿ-20 ವಿಶ್ವಕಪ್​ ಮುಗಿದ ಬೆನ್ನಲ್ಲೇ ಬಿಸಿಸಿಐ ನೂತನ್​ ಕೋಚ್​ ಹೆಸರನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.

ಇತ್ತ ಗೌತಮ್​ ಗಂಭೀರ್​ ಅವರನ್ನು ಕೆಕೆಆರ್​ ಮೆಂಟರ್​ ಆಗಿ ಉಳಿಸಿಕೊಳ್ಳಲು ಶಾರುಖ್​ ಖಾನ್​ ಅವರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದ್ದು, ಅವರಿಗೆ ಬ್ಲಾಂಕ್​ ಚೆಕ್​ ಆಫರ್​ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಫೈನಲ್​ ಮುಗಿದ ಬಳಿಕ ಈ ಬೆಳವಣಿಗೆಗಳು ನಡೆದಿದ್ದು, ಅಂತಿಮವಾಗಿ ಟಿ20 ವಿಶ್ವಕಪ್​ ಮುಗಿದ ಬಳಿಕ ಎಲ್ಲದಕ್ಕೂ ತೆರೆ ಬೀಳಲಿದೆ.

ಗೌತಮ್​ 2023ರವರೆಗೆ ಲಖನೌ ಸೂಪರ್‌ಜೈಂಟ್ಸ್‌ (LSG) ತಂಡದ ಮೆಂಟರ್​ ಆಗಿದ್ದರು ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (KKR​) ತಂಡಕ್ಕೆ ಶಿಫ್ಟ್ ಆಗಿದ್ದರು. ಕೆಕೆಆರ್​ ಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!