Wednesday, October 15, 2025

ಗ್ರೀನ್‌ ಬೆಂಗಳೂರು ಕಾರ್ಯಕ್ರಮ ಮುಂದುವರಿಸಲು ಜಿಬೆಎ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಾರಂಭಿಸಲು ಹಸಿರು ಬೆಂಗಳೂರು ಕಾರ್ಯಕ್ರಮವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ಪಾಲಿಕೆಗಳು ಮುಂದುವರೆಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

2025 ರ ಬಜೆಟ್‌ನಲ್ಲಿ ಗ್ರೀನ್ ಬೆಂಗಳೂರು ಕಾರ್ಯಕ್ರಮದ ಅಡಿಯಲ್ಲಿ ನಗರದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದಕ್ಕಾಗಿ ಬಿಬಿಎಂಪಿಯ ಅರಣ್ಯ ವಿಭಾಗಕ್ಕೆ ಬಜೆಟ್ ಹಂಚಿಕೆ 51.69 ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.

ಕಾರ್ಯಕ್ರಮದ ಅಡಿಯಲ್ಲಿ ಈವರೆಗೂ 84,100 ಸಸಿಗಳನ್ನು ನೆಡಲಾಗಿದೆ. ಆದರೆ, ಬಿಬಿಎಂಪಿ ಯುಗ ಅಂತ್ಯಗೊಂಡಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ತವಕ್ಕೆ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಕೈಗೆತ್ತಿಕ್ಕೊಂಡಿದ್ದ ಕಾರ್ಯಕ್ರಮಗಳ ಕುರಿತು ಗೊಂದಲಗಳು ಶುರುವಾಗಿದೆ.

ಇದೀಗ ಉಪ ಮುಖ್ಯಮಂತ್ರಿಗಳು ಆರಂಭಿಸಿದ್ದ ಗ್ರೀನ್ ಬೆಂಗಳೂರು ಕಾರ್ಯಕ್ರಮವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದುವರೆಸಲು ನಿರ್ಧರಿಸಿದೆ. ಆದರೆ, ಯಾವ ನಿಗಮವು ಎಷ್ಟು ಸಸಿಗಳನ್ನು ನೆಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿದುಬಂದಿದೆ.

error: Content is protected !!