ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರ ಉತ್ತರ ಭಾಗದ ಹೆಬ್ಬಾಳ, ಯಲಹಂಕ ಹಾಗೂ ಏರ್‌ಪೋರ್ಟ್ ರಸ್ತೆಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಅಕ್ರಮ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಹುಡುಕಲು ಜಿಬಿಎ ಮಹತ್ವದ ಯೋಜನೆ ರೂಪಿಸಿದೆ.
ಸಂಚಾರ ನಿಯಂತ್ರಣಕ್ಕಾಗಿ ಮೂರು ಮಾದರಿಯ ಪೇ & ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದು, ಟೋಯಿಂಗ್ ವ್ಯವಸ್ಥೆಯನ್ನೂ ಶೀಘ್ರ ಆರಂಭಿಸುವ ಸೂಚನೆ ನೀಡಿದೆ. ಹೆಬ್ಬಾಳ ದಲ್ಲಿ 10 ಸ್ಥಳಗಳಲ್ಲಿ ಹಾಗೂ ಯಲಹಂಕದಲ್ಲಿ 8 ಸ್ಥಳಗಳಲ್ಲಿ ಪೇ & ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಸಂಬಂಧ ಈಗಾಗಲೇ ಜಾಗ ಗುರುತಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಮುಖ್ಯ ರಸ್ತೆಗಳ ಬದಿಯಲ್ಲಿ ಆನ್-ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಗಳ ಆವರಣದಲ್ಲಿ ಆಫ್-ಸ್ಟ್ರೀಟ್ ಪಾರ್ಕಿಂಗ್ ವ್ಯವಸ್ಥೆ ಅಳವಡಿಸಲಾಗುತ್ತದೆ.
ನೋ ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನ ನಿಲ್ಲಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಉತ್ತರ ನಗರ ಪಾಲಿಕೆ ಟೋಯಿಂಗ್ ಕಾರ್ಯಾಚರಣೆಗೆ ಎರಡು ವಿಶೇಷ ವಾಹನಗಳನ್ನು ಖರೀದಿಸಿದ್ದು, ಶೀಘ್ರದಲ್ಲೇ ಕಾರ್ಯಾಚರಣೆ ಆರಂಭವಾಗಲಿದೆ. ಟೋಯಿಂಗ್ ಶುಲ್ಕವೂ ವಾಹನ ಸವಾರರಿಗೆ ಹೊರೆ ಆಗುವ ಸಾಧ್ಯತೆ ಇದೆ.


