ದೇಶದಲ್ಲಿ ಸಂಚಲನ ಮೂಡಿಸಿದ ಜಿಬಿಎಸ್​ ಕಾಯಿಲೆ, ಹೈದರಾಬಾದ್‌ನಲ್ಲಿ ಮೊದಲ ಕೇಸ್‌ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗ್ಯುಲೆನ್‌ ಬ್ಯಾರೆ ಸಿಂಡ್ರೋಮ್ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ. ದೇಶಾದ್ಯಂತ ಜಿಬಿಎಸ್ ಪ್ರಕರಣಗಳು ಹೆಚ್ಚುತ್ತಿದ್ದು ಆತಂಕ ಹುಟ್ಟಿಸಿದೆ. ಇದೀಗ ತೆಲಂಗಾಣದಲ್ಲಿ ಮೊದಲ ಜಿಬಿಎಸ್‌ನ ಪ್ರಕರಣ ದಾಖಲಾಗಿದೆ.

ಹೈದರಾಬಾದ್‌ನಲ್ಲಿ ಗ್ಯುಲೆನ್‌ ಬ್ಯಾರೆ ಸಿಂಡ್ರೋಮ್ ಕೇಸ್ ಪತ್ತೆ ಹಚ್ಚಲಾಗಿದೆ. ಸಿದ್ದಿಪೇಟೆಯ ಮಹಿಳೆಯೊಬ್ಬರು ಜಿಬಿಎಸ್ ಲಕ್ಷಣಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 4 ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಜಿಬಿಎಸ್‌ನಿಂದ ಮಗು ಸೇರಿ ಮೂವರು ಜೀವ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಸುಮಾರು 130 ಜಿಬಿಎಸ್ ಶಂಕಿತ ಪ್ರಕರಣಗಳು ದಾಖಲಾಗಿವೆ.

ಮೊದಲ ಜಿಬಿಎಸ್ ಪ್ರಕರಣ ದಾಖಲಾದ ಬೆನ್ನಲ್ಲೇ ತೆಲಂಗಾಣ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನಿಂದ ಇದು ಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಜಿಬಿಎಸ್ ಸೋಂಕು ತಗಲುತ್ತದೆ. ಈ ವೈರಸ್‌ ನರಗಳ ಮೇಲೆ ಪರಿಣಾಮ ಬೀರುತ್ತದೆ.

ಲಕ್ಷಣಗಳೇನು?

ಕೈ ಕಾಲು, ಮೊಣಕೈ ಹಾಗೂ ಮೊಣಕಾಲಿನಲ್ಲಿ ಚುಚ್ಚಿದಂತ ಅನುಭವ

ಇಡೀ ದೇಹದಲ್ಲಿ ವೀಕ್‌ನೆಸ್‌

ನಡೆಯಲು ಅಥವಾ ಮೆಟ್ಟಿಲು ಹತ್ತಲು ಆಗದೇ ಇರುವುದು

ಮಾತನಾಡಲು, ತಿನ್ನಲು, ನುಂಗಲು ಎಲ್ಲದಕ್ಕೂ ಸಮಸ್ಯೆ ಆಗುವುದು

ಕಣ್ಣನ್ನು ಆಚೀಚೆ ಅಲ್ಲಾಡಿಸಲು ಆಗದೇ ಇರುವುದು

ಇಡೀ ದೇಹದಲ್ಲಿ ನೋವು, ರಾತ್ರಿಯಲ್ಲಿ ಹೆಚ್ಚಳ

ಬ್ಲಾಡರ್‌ ಕಂಟ್ರೋಲ್‌ ಹಾಗೂ ಮೋಷನ್‌ ಕಂಟ್ರೋಲ್‌ ಮಾಡಲು ಆಗದೇ ಇರುವುದು

ಲೋಬಿಪಿ,ಉಸಿರಾಟದ ತೊಂದರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!