ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru highway) ಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದು, ಈ ಹಿನ್ನೆಲೆ ವಾಹನಗಳ ವೇಗಕ್ಕೆ ಬ್ರೇಕ್ ಹಾಕಲು ರಾಮನಗರ ಪೊಲೀಸರು ಮುಂದಾಗಿದ್ದಾರೆ.
ರಾಮನಗರದ ಚನ್ನಪಟ್ಟಣ ಬಳಿ ಇಂಟರ್ ಸೆಪ್ಟರ್ ಅಳವಡಿಸಿ ಟ್ರಾಫಿಕ್ ಪೊಲೀಸರು ಸ್ಪೀಡ್ ಚೆಕ್ ಮಾಡುತ್ತಿದ್ದು, ವೇಗದ ಲಿಮಿಟ್ ಕ್ರಾಸ್ ಮಾಡಿದ ವಾಹನ ಸವಾರರಿಗೆ 1000 ರೂ. ದಂಡ ಹಾಕುತ್ತಿದ್ದಾರೆ.
ಇದರ ಜೊತೆಗೆ ಹೆದ್ದಾರಿ ಮೇಲೆ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು, ಕಾರ್ ವೇಗದ ಮಿತಿ 100, ಬೈಕ್ ವೇಗದ ಮಿತಿ 80 ಹಾಗೂ ಟ್ರಕ್, ಲಾರಿ ಬಸ್ಸಿನ ಮಿತಿ 60 ನಿಗದಿ ಮಾಡಲಾಗಿದೆ. ಕಾರು 101 ವೇಗದಲ್ಲಿ ಹೋದರೂ 1000 ರೂ. ದಂಡ ಹಾಕಲಾಗುತ್ತಿದೆ.