ಗ್ರಾಹಕರಿಗೆ ಶಾಕ್ ನೀಡಲು ಸಜ್ಜು: ಹಾಲಿನ ದರ ಏರಿಕೆಯ ಸುಳಿವು ಕೊಟ್ಟ ಸಚಿವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗ್ರಾಹಕರಿಗೆ ರಾಜ್ಯ ಸರಕಾರ ಶಾಕ್ ನೀಡಲು ಸಜ್ಜಾಗಿದೆ. ಈ ಬಾರಿ ಹಾಲಿನ ದರ ಏರಿಕೆಯ ಸುಳಿವು ನೀಡಿದ್ದಾರೆ ಸಹಕಾರ ಸಚಿವ K. N ರಾಜಣ್ಣ

ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದೆ. ಹಾಲಿನ ದರ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ ಎಂದರು.ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಿಸುವ ಅನಿವಾರ್ಯತೆ ಇದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತವಾಗಿ ಮಾಹಿತಿ ನೀಡಲಿದ್ದೇವೆ ಎಂದರು.

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿ ಕೆಎಂಎಫ್ ನಿಯೋಗದಿಂದ ಜುಲೈ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ದರ 14 ರೂಪಾಯಿಯಷ್ಟು ಕಡಿಮೆ ಇದೆ ಹಾಲಿನ ದರ ಹೆಚ್ಚಳ ಮಾಡಿದ ಕಾರಣ ರೈತರು ಜಿಲ್ಲಾ ಒಕ್ಕೂಟಗಳಿಗೆ ಹಾಲು ಕೊಡಲು ಹಿಂದೇಟು ಹಾಕುತ್ತಿದ್ದು, ಇದರಿಂದ ಪ್ರತಿದಿನ 8 ಲಕ್ಷ ಲೀಟರ್ ನಷ್ಟು ಹಾಲು ಖಾಸಗಿಯವರ ಪಾಲಾಗುತ್ತದೆ ಎಂಬ ಮಾಹಿತಿಯನ್ನು ಸಿಎಂ ಗಮನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!