ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಿತೇಶ್ ದೇಶ್‌ಮುಖ್ ಹಾಗೂ ನಟಿ ಜೆನಿಲಿಯಾಗೆ ಮುದ್ದಾದ ಇಬ್ಬರು ಗಂಡುಮಕ್ಕಳಿದ್ದಾರೆ. ಯಾರೇ ಕಾಣಿಸಿದರೂ ಇಬ್ಬರೂ ಮಕ್ಕಳು ಕೈ ಮುಗಿದು ಮಾತನಾಡಿಸ್ತಾರೆ, ಹಾಗಾಗಿ ಇವರ ಸಂಸ್ಕಾರಕ್ಕೆ ಸಾಕಷ್ಟು ಫ್ಯಾನ್ಸ್ ಇದ್ದಾರೆ.
ಇದೀಗ ಈ ಅಣ್ಣಂದಿರಿಗೆ ತಮ್ಮನೋ, ತಂಗಿಯೋ ಬರುತ್ತಿದ್ದಾರೆ ಎನ್ನುವ ವಿಷಯ ಎಲ್ಲೆಡೆ ವೈರಲ್ ಆಗಿದೆ. ಜೆನಿಲಿಯಾ ಮೂರನೇ ಮಗುವಿಗೆ ತಾಯಿಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ರಿತೇಶ್ ಜೆನಿಲಿಯಾ ಕಾಣಿಸಿಕೊಂಡಿದ್ದು, ಬೇಬಿ ಬಂಪ್ ಕಾಣಿಸುತ್ತಿದೆ. ಜೆನಿಲಿಯಾ ಕೂಡ ಹೊಟ್ಟೆ ಮೇಲೆ ಕೈ ಹಿಡಿದುಕೊಂಡು ಓಡಾಡಿದ್ದು, ಈ ಅನುಮಾನಕ್ಕೆ ಕಾರಣವಾಗಿದೆ. ಈ ವಿಷಯ ನಿಜವೇ ಆದ್ರೆ ಇನ್ನೇನು ಕೆಲವೇ ದಿನಗಳಲ್ಲಿ ಸುದ್ದಿ ಹೊರಬೀಳಲಿದೆ.