HEALTH | ಜಂಕ್ ಫುಡ್ ಅಡಿಕ್ಷನ್ ನಿಂದ ಹೀಗೆ ಹೊರಬನ್ನಿ.. ಟಿಪ್ಸ್ ಇಲ್ಲಿದೆ

ಜಂಕ್ ಫುಡ್ ರುಚಿ ಬಗ್ಗೆ ಬೇರೆ ಮಾತಿಲ್ಲ, ಅದರ ಟೇಸ್ಟ್ ಮನೆಯಲ್ಲಿ ಮಾಡೋ ಅಡುಗೆಯಲ್ಲಿ ಸಿಗೋದೇ ಇಲ್ಲ. ಹೊರಗಡೆ ಜಂಕ್ ಫುಡ್ ತಿಂದಾಗ ಆಗೋ ಖುಷಿ ಮನೆಯ ರೊಟ್ಟಿ ಅನ್ನ ಸಾರಿನಲ್ಲಿ ಇಲ್ಲ. ಆದರೆ ಈ ಜಂಕ್‌ಫುಡ್ ನಿಮ್ಮ ದೇಹಕ್ಕೆ ಏನು ಮಾಡ್ತಿದೆ? ತಿನ್ನೋದು ನಿಲ್ಲಿಸಬೇಕು ಆದರೂ ನಿಲ್ಲಿಸೋಕೆ ಆಗೋದಿಲ್ಲ ಎಂದರೆ ಈ ಟಿಪ್ಸ್ ನಿಮಗೆ ಸಹಾಯ ಆಗಲಿದೆ..

  • ಜಾಸ್ತಿ ನೀರು ಕುಡಿಯೋಕೆ ಆರಂಭಿಸಿ, ಬಾಯಾರಿಕೆಯನ್ನು ಹಸಿವು ಎಂದುಕೊಂಡು ಜಂಕ್ ಫುಡ್ ತಿನ್ನೋದು ಜಾಸ್ತಿ
  • ಪ್ರೋಟೀನ್ ಇರುವ ಆಹಾರ ತಿನ್ನಿ, ಇದು ಜಾಸ್ತಿ ಸಮಯದವರೆಗೂ ನಿಮ್ಮ ಹಸಿವನ್ನು ತಡೆಯುತ್ತದೆ.
  • ಜಂಕ್ ಫುಡ್ ತಿನ್ನುವವರಿಂದ ಸ್ವಲ್ಪ ದೂರ ಇರಿ, ಅವರು ತಿನ್ನುವ ವೇಳೆ ಅಲ್ಲೇ ಇದ್ರೆ ತಿನ್ನೋದು ಗ್ಯಾರೆಂಟಿ
  • ಸ್ವಲ್ಪ ಹಸಿವಾದಂತೆ ತಿಂದುಬಿಡಿ, ಜಾಸ್ತಿ ಹಸಿವು ಮಾಡಿಕೊಂಡ್ರೆ ಈಸಿಯಾಗಿ ಸಿಗುವ ಜಂಕ್ ಫುಡ್ ತಿಂದುಬಿಡೋಣ ಎನಿಸುತ್ತದೆ.
  • ಒತ್ತಡದ ಜೀವನಶೈಲಿ ಇದ್ದರೆ ಬದಲಾಯಿಸಿ, ಅಡುಗೆ ಮಾಡೋಕೆ ಸಮಯವೇ ಇಲ್ಲವಾದ್ರೆ ಹೊರಗೆ ತಿನ್ನೋದು ಮಾಮೂಲಿ
  • ಒಳ್ಳೆಯ ನಿದ್ದೆ, ವ್ಯಾಯಾಮ ಮಾಡಿ
  • ಒಂದೇ ಬಾರಿ ಎಲ್ಲ ತಿಂದುಬಿಡೋ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿಂತಾ ಇರಿ.
  • ಚೆನ್ನಾಗಿ ಅಗಿದು ತಿನ್ನಬೇಕು
  • ನಿಮ್ಮಿಷ್ಟದ ಜಂಕ್ ಫುಡ್ ಸ್ಟಾಕ್ ಮನೆಯಲ್ಲಿ ಇದ್ದರೆ ಅದನ್ನು ಮೊದಲು ಎತ್ತಿಡಿ, ಮನೆಯಲ್ಲಿ ಜಂಕ್ ಫುಡ್ ಬರೋದೇ ಬೇಡ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!