ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತಾದ ವೈದ್ಯಕೀಯ ಕಾಲೇಜಿನಲ್ಲಿ ಕೊಲೆಯಾದ ಸ್ನಾತಕೋತ್ತರ ತರಬೇತಿ ವೈದ್ಯೆಯ ತಂದೆ ಸರ್ಕಾರ ನೀಡಲು ಮುಂದಾಗಿರುವ ಪರಿಹಾರದ ಮೊತ್ತವನ್ನು ನಿರಾಕರಿಸಿದ್ದಾರೆ.
ದುಡ್ಡು ಪಡೆದರೆ ಮೃತಪಟ್ಟ ಆಕೆಗೆ ಅಗೌರವ ಎಂದ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಸಿಬಿಐ ಜೊತೆಗಿನ ಸಂಭಾಷಣೆಯ ಬಗ್ಗೆ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲು ನಿರಾಕರಿಸಿದ್ದಾರೆ.
ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ಭರವಸೆ ಸಿಕ್ಕಿದೆ. ನಮ್ಮ ಹೇಳಿಕೆ ಆಧರಿಸಿ ಆಧಾರದ ಮೇಲೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಿಬಿಐ ನಮಗೆ ಭರವಸೆ ನೀಡಿದೆ. ನಾನು ಪರಿಹಾರವನ್ನು ತಿರಸ್ಕರಿಸಿದ್ದೇನೆ. ನನ್ನ ಮಗಳ ಸಾವಿಗೆ ಪರಿಹಾರವಾಗಿ ನಾನು ಹಣವನ್ನು ಸ್ವೀಕರಿಸಿದರೆ ಅದು ನನ್ನ ಮಗಳಿಗೆ ನೋವುಂಟು ಮಾಡುತ್ತದೆ. ನನಗೆ ನ್ಯಾಯ ಬೇಕು ಎಂದು ಅವರು ಹೇಳಿದ್ದಾರೆ.
ಸಿಬಿಐ ಜೊತೆಗಿನ ನಮ್ಮ ಸಂಭಾಷಣೆಯ ವಿವರಗಳನ್ನು ಬಹಿರಂಗ ಮಾಡುವುದು ಕಾನೂನುಬದ್ಧವಾಗಿ ಸೂಕ್ತವಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ವಿಚಾರಣೆಯ ವಿವರಗಳನ್ನು ನಾನು ನಿಮಗೆ ನೀಡಲು ಸಾಧ್ಯವಿಲ್ಲ. ಅವರು ನಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶ ಮತ್ತು ಪ್ರಪಂಚದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮೊಂದಿಗೆ ನಿಂತಿರುವ ಪ್ರತಿಯೊಬ್ಬರನ್ನೂ ನಾನು ನನ್ನ ಪುತ್ರರು ಮತ್ತು ಪುತ್ರಿಯರೆಂದು ಪರಿಗಣಿಸುತ್ತೇನೆ ಎಂದು ಆಕೆಯ ತಂದೆ ಹೇಳಿದ್ದಾರೆ.