ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್‌ನ ಲಂಗರ್ ಹೌಜ್ ಠಾಣೆ ವ್ಯಾಪ್ತಿಯ ಖಾದರ್ ಬಾಗ್ ಪ್ರದೇಶದ ಮನೆಯೊಂದರಲ್ಲಿ ಗೀಸರ್ ಸ್ಫೋಟವಾಗಿದ್ದು, ವೈದ್ಯ ದಂಪತಿ ಮೃತಪಟ್ಟಿದ್ದಾರೆ.
ಶಾರ್ಟ್ ಸರ್ಕೀಟ್‌ನಿಂದ ಸ್ನಾನ ಗೃಹದಲ್ಲಿ ಗೀಸರ್ ಸ್ಫೋಟಗೊಂಡಿದ್ದು, ನಿಸಾರುದ್ದೀನ್ ಹಾಗೂ ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳೀಯರು ಹೇಳುವಂತೆ ಗುರುವಾತ್ರಿ ರಾತ್ರಿ ಅವಘಡ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.