Wednesday, September 3, 2025

ಘಾನಾ ವಾಯುಪಡೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ ಪತನ: 8 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಘಾನಾ ವಾಯುಪಡೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಸಚಿವರು ಸೇರಿ ಎಂಟು ಜನ ಸಾವನ್ನಪ್ಪಿದ್ದಾರೆ.

ಬುಧವಾರ (ಆ.6) ಬೆಳಿಗ್ಗೆ ಅಕ್ರಾದಿಂದ ಚಿನ್ನದ ಗಣಿಗಾರಿಕಾ ಪ್ರದೇಶವಾದ ಒಬುವಾಸಿಗೆ ಹೋಗುತ್ತಿದ್ದ Z9 ಮಿಲಿಟರಿ ಹೆಲಿಕಾಪ್ಟರ್ ಘಾನಾದ ದಕ್ಷಿಣದಲ್ಲಿರುವ ಅಶಾಂತಿ ಎಂಬಲ್ಲಿ ಪತನಗೊಂಡಿದೆ. ಈ ವೇಳೆ ಘಾನಾದ ರಕ್ಷಣಾ ಸಚಿವ ಎಡ್ವರ್ಡ್ ಒಮಾನೆ ಬೋಮಾ, ಪರಿಸರ ಸಚಿವ ಇಬ್ರಾಹಿಂ ಮುರ್ತಲಾ ಮುಹಮ್ಮದ್ ಮೃತಪಟ್ಟಿರುವುದಾಗಿ ಘಾನಾ ಸರ್ಕಾರ ದೃಢಪಡಿಸಿದೆ.

ಮೂವರು ಅಧಿಕಾರಿಗಳು ಹಾಗೂ ಮೂವರು ಹೆಲಿಕಾಪ್ಟರ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ