ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಿಫ್ಟ್‌ನಲ್ಲಿ ಒಂಬತ್ತು ಜನ ಸಿಕ್ಕಿಬಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಹೋಮ್ ಸೊಸೈಟಿ ಲಿಫ್ಟ್ ಸ್ಥಗಿತಗೊಂಡು ಸುಮಾರು 15 ನಿಮಿಷಗಳ ಕಾಲ ಒಳಗೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೇಗೋ ಕಷ್ಟಪಟ್ಟು ಕೈಯಾರೆ ಲಿಫ್ಟ್ ತೆರೆದ ಬಳಿಕ ಲಿಫ್ಟ್‌ನಿಂದ ಹೊರ ಬಂದಿದ್ದಾರೆ.
ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಲಿಫ್ಟ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಸೇರಿ 9ಮಂದಿ ಸಿಲುಕಿದ್ದರು. ಕಾರ್ಯನಿರತವಾಗಿದ್ದ ಲಿಫ್ಟ್ ಇದ್ದಕ್ಕಿದ್ದಂತೆ 5, 6 ನೇ ಮಹಡಿಯ ಮಧ್ಯದಲ್ಲಿ ನಿಂತಿತು. ಕೂಡಲೇ ಭಯಭೀತರಾದ ಜನ ಕೂಗಾಡಿದ್ದಾರೆ. ಶಬ್ದ ಮಾಡುತ್ತಿದ್ದಂತೆ, ಭದ್ರತಾ ಸಿಬ್ಬಂದಿ ಮತ್ತು ಇತರ ನಿವಾಸಿಗಳು ಬಲಪ್ರಯೋಗಿಸಿ ಲಿಫ್ಟ್ ನಿಂದ ಜನರನ್ನು ಕಾಪಾಡಿದ್ದಾರೆ.
ಲಿಫ್ಟ್‌ನ ಕಳಪೆ ನಿರ್ವಹಣೆಯಿಂದಾಗಿ ಈ ಘಟನೆಗಳು ಆಗಾಗ್ಗೆ ಸಂಭವಿಸುತ್ತವೆ. ಇಂತಹ ಘಟನೆ ನಡೆದ ನಂತರ ಪ್ರಕರಣ ದಾಖಲಾಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ನೋಯ್ಡಾ, ಗ್ರೇಟರ್ ನೋಯ್ಡಾ, ಗ್ರೇಟರ್ ನೋಯ್ಡಾ ಪಶ್ಚಿಮ, ಗಾಜಿಯಾಬಾದ್ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಹು ಅಂತಸ್ತಿನ ಹೌಸಿಂಗ್ ಸೊಸೈಟಿಗಳಿವೆ. ಈ ಕಟ್ಟಡಗಳ ಒಳಗೆ ಹೋಗಲು ಲಿಫ್ಟ್ ಮತ್ತು ಎಲಿವೇಟರ್ ಅನ್ನು ಅವಲಂಬಿಸಬೇಕಾಗುತ್ತದೆ. ಈ ವೇಳೆ ಇಂತಹ ಅನಾಹುತ ಸಂಭವಿಸಿದರೆ ಏನು ಮಾಡುವುದು ಎಂದು ಜನ ಆಕ್ರೋಶ ಹೊರಹಾಕಿದರು.