ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಕ ಮತ್ತು ಇಬ್ಬರು ಯುವತಿಯರು ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ಕ್ಯಾಮೆರಾ ಹಿಡಿದು ಕಾರಿನ ಮುಂದೆ ನಿಂತು ಡ್ಯಾನ್ಸ್ ಮಾಡಿದ್ದಾರೆ. ಯುವತಿಯರ ನೃತ್ಯ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯುವಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಕೌಶಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈರಲ್ ಆಗಿರುವ ವಿಡಿಯೋ ಡಿಸೆಂಬರ್ 10ರಂದು ನಮ್ಮ ಗಮನಕ್ಕೆ ಬಂದಿದೆ. ರಸ್ತೆ ತಡೆ ನಡೆಸಿ ವಾಹನ ಸವಾರರಿಗೆ ತೊಂದರೆ ಮಾಡಿದ್ದಾರೆ ಹಾಗಾಗಿ ಯುವಕನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ರಾತ್ರಿ ಇಬ್ಬರು ಯುವತಿಯರು ಹಾಗೂ ಯುವಕ ಕಾರಿನಲ್ಲಿ ರಸ್ತೆಯಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.
गाजियाबाद में एलिवेटेड रोड पर खड़ी कार' बोनट पर केक और सड़क पर डांस' इसी जुर्म में करीब 50 लड़के पहले पकड़े जा चुके हैं।@ghaziabadpolice #UPPolice pic.twitter.com/MJ7eyiSrAF
— Komal karanwal (@Komalkaranwal_) December 11, 2022
कल दि0 10.12.22 को सोशल मीडिया पर वायरल वीडियो जिसमे 1 युवक व 2 युवती अपनी कार से एलिवेटेड रोड पर सार्वजनिक मार्ग को अवरुद्व कर डांस कर रहे थे का संज्ञान लेते हुए थाना कौशांबी पर अभियोग पंजीकृत किया गया था, थाना कौशांबी पुलिस द्वारा युवक को गिरफ्तार कर उक्त कार को सीज किया गया है pic.twitter.com/6hohBJ4OoU
— GHAZIABAD POLICE (@ghaziabadpolice) December 11, 2022