January19, 2026
Monday, January 19, 2026
spot_img

Ghee | ತುಪ್ಪ ಆರೋಗ್ಯಕ್ಕೆ ಒಳ್ಳೆದು…ಆದ್ರೆ ಈ ಸಮಸ್ಯೆ ಇರೋರು ತಪ್ಪಿಯೂ ತಿನ್ನೋಕೆ ಹೋಗ್ಬೇಡಿ

ತುಪ್ಪವನ್ನು ಭಾರತೀಯ ಅಡುಗೆಯ ಅವಿಭಾಜ್ಯ ಅಂಗವೆಂದು ಹೇಳಬಹುದು. ಪುರಾತನ ಕಾಲದಿಂದಲೇ ತುಪ್ಪವನ್ನು ಶ್ರೇಷ್ಠ ಆಹಾರವೆಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ದೇಹಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸುವುದರ ಜೊತೆಗೆ ತುಪ್ಪವು ತ್ವಚೆಯ ಕಾಂತಿ, ಕಣ್ಣಿನ ಆರೋಗ್ಯ ಮತ್ತು ಬೌದ್ಧಿಕ ಶಕ್ತಿಯನ್ನು ವೃದ್ಧಿಸಲು ಸಹ ಸಹಾಯ ಮಾಡುತ್ತದೆ. ಆದರೆ ಅತಿಯಾದ ಸೇವನೆ ಅಥವಾ ಕೆಲವು ವಿಶೇಷ ಆರೋಗ್ಯ ಸಮಸ್ಯೆಗಳಿರುವವರು ತುಪ್ಪವನ್ನು ತಿನ್ನುವುದು ಹಿತಕರವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಪಚನಕ್ರಿಯೆ ಸೂಕ್ಷ್ಮ ಇರುವವರು

ಡೈಜೆಷನ್ ಸಮಸ್ಯೆ, ಅಸಿಡಿಟಿ ಅಥವಾ ಹುಳಿತೇಗು ಸಮಸ್ಯೆ ಇರುವವರು ತುಪ್ಪ ಸೇವನೆ ಮಾಡಿದರೆ ಹೊಟ್ಟೆಯುಬ್ಬರ, ವಾಕರಿಕೆ ಮತ್ತು ಜೀರ್ಣ ಕ್ರಿಯೆಯ ತೊಂದರೆ ಹೆಚ್ಚಾಗಬಹುದು. ಇದರಿಂದ ಬ್ಲಾಡರ್‌ಗೂ ಹಾನಿಯಾಗುವ ಸಾಧ್ಯತೆ ಇದೆ.

ತೂಕ ಇಳಿಸಲು ಯತ್ನಿಸುವವರು

ತುಪ್ಪದಲ್ಲಿ ಹೆಚ್ಚು ಕೊಬ್ಬು ಮತ್ತು ಕ್ಯಾಲೊರಿಗಳಿದ್ದು ತೂಕ ನಿರ್ವಹಣೆ ಮಾಡಲು ಪ್ರಯತ್ನಿಸುವವರಿಗೆ ಇದು ಅಡ್ಡಿಯಾಗಬಹುದು. ತುಪ್ಪ ತಿನ್ನುವುದರಿಂದ ಅನವಶ್ಯಕವಾಗಿ ಹಸಿವು ಹೆಚ್ಚುವ ಸಮಸ್ಯೆ ಎದುರಾಗಬಹುದು.

ಲೀವರ್ ಸಮಸ್ಯೆ ಹೊಂದಿರುವವರು

ಲೀವರ್ ಸಂಬಂಧಿ ಸಮಸ್ಯೆ ಇರುವವರು ತುಪ್ಪ ಸೇವಿಸಿದರೆ ಅಸಮಾಧಾನಕಾರಿ ಪರಿಣಾಮಗಳು ಉಂಟಾಗಬಹುದು. ತಜ್ಞರ ಪ್ರಕಾರ ಲೀವರ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಹೆಚ್ಚು ಕೊಲೆಸ್ಟ್ರಾಲ್ ಹೊಂದಿರುವವರು

ದೇಹದಲ್ಲಿ ಈಗಾಗಲೇ ಹೆಚ್ಚು ಕೊಲೆಸ್ಟ್ರಾಲ್ ಇರುವವರು ತುಪ್ಪ ಸೇವನೆ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಬಹುದು. ಹೀಗಾಗಿ ಇವರು ತುಪ್ಪವನ್ನು ನಿಯಂತ್ರಿತವಾಗಿ ಅಥವಾ ಸಂಪೂರ್ಣವಾಗಿ ದೂರವಿಡುವುದು ಉತ್ತಮ.

Must Read

error: Content is protected !!