ಭಾರತದಲ್ಲಿ ಬೆಳಗಿನ ಹೊತ್ತು ಚಹಾ ಇಲ್ಲದೆ ದಿನ ಆರಂಭವಾಗುವುದು ಅಸಾಧ್ಯ ಎಂಬಷ್ಟು ಅಭ್ಯಾಸವಾಗಿದೆ. ಸಾಮಾನ್ಯವಾಗಿ ನಾವು ಲೆಮನ್ ಟೀ, ಗ್ರೀನ್ ಟೀ, ಬೆಲ್ಲದ ಟೀ ಕುಡಿಯುತ್ತೇವೆ. ಆದರೆ ಇತ್ತೀಚೆಗೆ “ಘೀ ಟೀ” ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅಂದರೆ, ಸಾಮಾನ್ಯ ಚಹಾದಲ್ಲೇ ಒಂದು ಚಮಚ ತುಪ್ಪ ಹಾಕಿ ಕುಡಿಯುವುದೇ ಘೀ ಟೀ. ಇದನ್ನು ಕೇಳಿದಾಗ ವಿಚಿತ್ರವಾಗಿ ತೋರಿದರು, ಆರೋಗ್ಯ ತಜ್ಞರ ಪ್ರಕಾರ ಇದರಿಂದ ಹಲವಾರು ಲಾಭಗಳಿವೆ.
ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ
ತುಪ್ಪದಲ್ಲಿ ಇರುವ ಆರೋಗ್ಯಕರ ಕೊಬ್ಬಿನ ಅಂಶ ದೇಹಕ್ಕೆ ಬೇಕಾದಷ್ಟು ಶಕ್ತಿ ನೀಡುತ್ತದೆ. ಬೆಳಗಿನ ಚಹಾದಲ್ಲಿ ತುಪ್ಪ ಸೇರಿಸಿ ಕುಡಿಯುವುದರಿಂದ ದೀರ್ಘಕಾಲ ದೇಹ ಚುರುಕಾಗಿ ಇರುತ್ತದೆ. ಮೆದುಳು ಹಾಗೂ ಸ್ನಾಯುಗಳಿಗೆ ಇದರಿಂದ ಶಕ್ತಿ ದೊರೆತು ದಿನವಿಡೀ ದೇಹ ಚೈತನ್ಯದಿಂದ ಕೂಡಿರುತ್ತದೆ.
ಕರುಳಿನ ಕಾರ್ಯಕ್ಷಮತೆ ಸುಧಾರಿಸುತ್ತದೆ
ತುಪ್ಪದಲ್ಲಿರುವ ಫ್ಯಾಟಿ ಆಸಿಡ್ ಕರುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಉರಿಯೂತ ಕಡಿಮೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
ತೂಕ ಇಳಿಕೆಗೆ ಸಹಕಾರಿ
ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಅನಾರೋಗ್ಯಕರ ಕೊಬ್ಬು ಕರಗಲು ಸಹಾಯವಾಗುತ್ತದೆ. ಚಹಾದಲ್ಲಿ ತುಪ್ಪ ಸೇರಿಸಿ ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ, ಜೊತೆಗೆ ಚಯಾಪಚಯ ವೇಗ ಹೆಚ್ಚಾಗಿ ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.
ಋತುಚಕ್ರದ ನೋವಿಗೆ ಪರಿಹಾರ
ತುಪ್ಪದಲ್ಲಿ ಉರಿಯೂತ ವಿರೋಧಿ ಗುಣಗಳಿರುವುದರಿಂದ ಋತುಮತಿಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಹಾಗೂ ಬೆನ್ನು ಸೆಳೆತ ಕಡಿಮೆಯಾಗುತ್ತದೆ.
ಮಾನಸಿಕ ಚೈತನ್ಯ ಹೆಚ್ಚಿಸುತ್ತದೆ
ತುಪ್ಪದಲ್ಲಿರುವ ಉತ್ತಮ ಕೊಬ್ಬಿನ ಅಂಶ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಗಮನ ಏಕಾಗ್ರತೆ ಹೆಚ್ಚಾಗುತ್ತದೆ, ಮಾನಸಿಕ ಚೈತನ್ಯ ಸಿಗುತ್ತದೆ.
ಚಹಾದಲ್ಲಿ ತುಪ್ಪ ಸೇರಿಸುವುದು ಪ್ರಾರಂಭದಲ್ಲಿ ಅಸಾಧಾರಣವಾಗಿ ತೋರಾದರೂ, ಇದರಿಂದ ದೇಹಕ್ಕೆ ಶಕ್ತಿ, ಜೀರ್ಣಕ್ರಿಯೆಯ ಸುಧಾರಣೆ, ತೂಕ ನಿಯಂತ್ರಣ ಹಾಗೂ ಮಾನಸಿಕ ಚೈತನ್ಯ ದೊರಕುತ್ತದೆ. ಆದ್ದರಿಂದ ಬೆಳಗಿನ ಒಂದು ಕಪ್ ಘೀ ಟೀ ಆರೋಗ್ಯಕರ ಜೀವನಶೈಲಿಗೆ ಸಹಾಯಕವಾಗಬಹುದು. ಆದರೆ ಮಿತವಾದ ಪ್ರಮಾಣದಲ್ಲಿ ಮಾತ್ರ ಸೇವಿಸುವುದು ಉತ್ತಮ.