ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದ ಗ್ರಾಮಸ್ಥರು ಘೇರಾವ್ ಹಾಕಿದ್ದಾರೆ.
ವರುಣಾ ಕ್ಷೇತ್ರದ ಮುದ್ದುಬೀರನಹುಂಡಿ ಗ್ರಾಮದ ಕುಂದು ಕೊರತೆ ಆಲಿಸಲು ಹೋದಾಗ ಜನರು ತಮ್ಮ ಸಮಸ್ಯೆಗಳನ್ನು ಸಂಕಷ್ಟಗಳನ್ನು ಹೇಳುವ ಬದಲು ಘೇರಾವ್ ಹಾಕಿ ಇಲ್ಲಿಂದ ಹೋಗಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರನ್ನು ಸಮಾಧಾನಮಾಡಲು ಸಾಧ್ಯವಾಗದೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ.