ಅನಾರೋಗ್ಯವನ್ನು ಗಿಫ್ಟ್ ಕೊಟ್ಟಿದ್ದಾರೆ: ನಟ ಜಗ್ಗೇಶ್

ಹೊಸದಿಂತ ಡಿಜಿಟಲ್ ಡೆಸ್ಕ್:

ಬಿಜೆಪಿ ಸಂಸದ, ನಟ ಜಗ್ಗೇಶ್ (Jaggesh) ಅನಾರೋಗ್ಯದಿಂದ ಬಳಲುತ್ತಿದ್ದಾರೆ .

ಕಳೆದ ಏಳು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದು, ಹಾಸಿಗೆಯಿಂದ ಏಳಕ್ಕೂ ಆಗದೇ ಇರುವಂತಹ ಸ್ಥಿತಿಯಲ್ಲಿದ್ದಾರೆ. ತಮಗೆ ಹೀಗೆ ಆಗಿದ್ದು ಯಾಕೆ ಎನ್ನುವುದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಜೊತೆಗೆ ಮನವಿಯೊಂದನ್ನು ಮಾಡಿದ್ದಾರೆ.

ನನ್ನನ್ನು ಗೀತಾ ಅವರು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಅವರ ಆಹ್ವಾನವನ್ನು ಮನ್ನಿಸಿ ಅಲ್ಲಿಗೆ ಹೋದೆ. ಸಾಕಷ್ಟು ಜನರು ಆ ಕಾರ್ಯಕ್ರಮದಲ್ಲಿ ಭಾಗಿಯಾದ್ದರು. ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದರು. ಫೋಟೋ ಬೇಡ ಅಂತಾ ಹೇಳಿದರೆ ಕಷ್ಟ, ಮಾಸ್ಕ್ (Mask)ಹಾಕಿದರೆ ಮತ್ತೊಂದು ರೀತಿ ತಿಳಿದುಕೊಳ್ಳುತ್ತಾರೆ ಅಂತ ಕೇಳಿದವರಿಗೆಲ್ಲ ಫೋಟೋ ನೀಡಿದೆ. ಯಾರೋ ಪುಣ್ಯಾತ್ಮರು ನನಗೆ ಅನಾರೋಗ್ಯವನ್ನು ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ದಯವಿಟ್ಟು ಯಾರಿಗಾದರೂ ಶೀತ, ಜ್ವರ, ಅನಾರೋಗ್ಯವಿದ್ದರೆ ಮನೆಯಲ್ಲಿ ಇರಿ. ಹೀಗೆ ಕಾರ್ಯಕ್ರಮಕ್ಕೆ ಬಂದು ಬೇರೆಯವರಿಗೆ ತೊಂದರೆ ಕೊಡಬೇಕು. ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ ಎಂದು ಹಲವಾರು ಸಲಹೆಗಳನ್ನು ನೀಡಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!