ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ (Loksabha Election) ಸಮೀಪ ಹಿನ್ನೆಲೆ ರಾಮನಗರದಲ್ಲೂ ಕಾಂಗ್ರೆಸ್ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಉಡುಗೊರೆ ನೀಡುವುದಾಗಿ ಗಿಫ್ಟ್ ಕೂಪನ್ ನೀಡಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡುತ್ತಿದೆ. ಈ ಮೂಲಕ ಒಂದೇ ಗಿಫ್ಟ್ ಮೂಲಕ ಎರಡೂ ಚುನಾವಣೆಗಳ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡ್ತಿದೆ.
ಗಿಫ್ಟ್ ಬಾಕ್ಸ್ ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿಕೆ ಸುರೇಶ್ ಹಾಗೂ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಭಾವಚಿತ್ರಗಳನ್ನ ಹಾಕಿ ಕುಕ್ಕರ್, ತವಾ, ಡಿನ್ನರ್ ಸೆಟ್ ಗಳ ಗಿಫ್ಟ್ ಬಾಕ್ಸ್ ಹಂಚಿಕೆ ಮಾಡಲಾಗ್ತಿದೆ. ಗಿಫ್ಟ್ ಬಾಕ್ಸ್ ನೀಡಿ ಕಾಂಗ್ರೆಸ್ ಗೆ ವೋಟ್ ಹಾಕುವಂತೆ ತಾಕೀತು ಮಾಡಲಾಗ್ತಿದೆ ಎಂದು ಕಾಂಗ್ರೆಸ್ ನಾಯಕರ ಗಿಫ್ಟ್ ಪಾಲಿಟಿಕ್ಸ್ ಗೆ ಬಿಜೆಪಿ-ಜೆಡಿಎಸ್ (BJP- JDS) ಮುಖಂಡರು ಕಿಡಿಕಾರಿದ್ದಾರೆ.