ಗಿಲ್​ ಸೆಂಚುರಿ, ಕೊಹ್ಲಿ- ಅಯ್ಯರ್ ಅರ್ಧಶತಕದ ಆಟ: ಇಂಗ್ಲೆಂಡ್​ ಗೆಲುವಿಗೆ 357 ರನ್​ಗಳ ಟಾರ್ಗೆಟ್ ಕೊಟ್ಟ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್​ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನ 2-0ಯಲ್ಲಿ ವಶಪಡಿಸಿಕೊಂಡಿರುವ ಭಾರತ ತಂಡ 3ನೇ ಏಕದಿನ ಪಂದ್ಯದಲ್ಲಿ 50 ಓವರ್​ಗಳಲ್ಲಿ 356 ರನ್​ಗಳಿಸಿದೆ.

ಆರಂಭಿಕನಾಗಿ ಕಣಕ್ಕಿಳಿದಿದ್ದ ಉಪನಾಯಕ ಶುಭ್​ಮನ್​ ಗಿಲ್​ ಶತಕ ಸಿಡಿಸಿದರೆ, ಕೊಹ್ಲಿ, ಶ್ರೇಯಸ್ ಅಯ್ಯರ್ ಅರ್ಧಶತಕ ಸಿಡಿಸಿ ಬೃಹತ್​ ಮೊತ್ತಕ್ಕೆ ಕಾರಣರಾದರು.

ಟಾಸ್​ ಗೆದ್ದ ಇಂಗ್ಲೆಂಡ್ ಭಾರತಕ್ಕೆ ಬ್ಯಾಟಿಂಗ್ ಆಹ್ವಾನಿಸಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ರೋಹಿತ್ ಶರ್ಮಾ (1) 2ನೇ ಓವರ್​ನಲ್​ ಮಾರ್ಕ್​​ ವುಡ್​ ಬೌಲಿಂಗ್​ನಲ್ಲಿ ಫಿಲ್ ಸಾಲ್ಟ್​ಗೆ ವಿಕೆಟ್ ಒಪ್ಪಿಸಿದರು. ಆದರೆ 2ನೇ ವಿಕೆಟ್​ಗೆ ಒಂದಾದ ಗಿಲ್ ಹಾಗೂ ಕೊಹ್ಲಿ 116 ರನ್​ಗಳ ಜೊತೆಯಾಟ ನೀಡಿದರು. 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 52 ರನ್​ಗಳಿಸಿ ರಶೀದ್ ಬೌಲಿಂಗ್​ನಲ್ಲಿ ಸಾಲ್ಟ್​ಗೆ ಕ್ಯಾಚ್ ನೀಡಿ ಔಟ್ ಆದರು.

ಕೊಹ್ಲಿ ವಿಕೆಟ್ ಕಳೆದುಕೊಂಡ ನಂತರ ಬಂದ ಶ್ರೇಯಸ್ ಅಯ್ಯರ್ 3ನೇ ವಿಕೆಟ್​ಗೆ 104 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದರು. 102 ಎಸೆತಗಳನ್ನು ಎದುರಿಸಿದ ಶುಭ್​ಮನ್ ಗಿಲ್ 14 ಬೌಂಡರಿ, 3 ಸಿಕ್ಸರ್​ಗಳ ನೆರವಿನಿಂದ 112 ರನ್​ಗಳಿಸಿ ಅವರೂ ಕೂಡ ರಶೀದ್​ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ನಂತರ ಬಂದ ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ 17 ರನ್​ಗಳಿಸಿ ರಶೀದ್​ಗೆ 4ನೇ ಬಲಿಯಾದರು.

ಕನ್ನಡಿಗ ಕೆಎಲ್ ರಾಹುಲ್ 29 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 40ರನ್​ಗಳಿಸಿದರೆ, ಅಕ್ಷರ್ ಪಟೇಲ್ 13, ವಾಷಿಂಗ್ಟನ್ ಸುಂದರ್ 14, ಹರ್ಷಿತ್ ರಾಣಾ 13 ರನ್​ಗಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!