ಗಿಲ್, ಸಾಯಿ ಅರ್ಧಶತಕದ ಆಟ: ಲಖನೌ ಗೆಲುವಿಗೆ 181 ರನ್​ಗಳ ಸವಾಲಿನ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಯಕ ಶುಭ್​ಮನ್​ ಗಿಲ್, ಸಾಯಿ ಸುದರ್ಶನ್ ಅರ್ಧಶತಕದ ಆಟದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್​ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಗುಜರಾತ್ ಟೈಟನ್ಸ್ ಅದ್ಭುತ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್​ಗೆ ನಾಯಕ ಗಿಲ್ ಹಾಗೂ ಸುದರ್ಶನ್ 121 ರನ್​ಗಳ ಜೊತೆಯಾಟ ನೀಡಿದರು.

ಶುಭ್​ಮನ್ ಗಿಲ್ 38 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ನೆರವಿನಿಂದ 60 ರನ್​ಗಳಿಸಿ ಅವೇಶ್ ಖಾನ್​ ಬೌಲಿಂಗ್​​ನಲ್ಲಿ ಮಾರ್ಕ್ರಮ್​ಗೆ ಕ್ಯಾಚ್ ನೀಡಿ ಔಟ್ ಆದರು. ಇವರ ಬೆನ್ನಲ್ಲೇ 2 ರನ್​ಗಳ ಅಂತರದಲ್ಲಿ ಸಾಯಿ ಸುದರ್ಶನ್ ಕೂಡ ಔಟ್ ಆದರು. ಸುದರ್ಶನ್ 37 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 56 ರನ್​ಗಳಿಸಿ ರವಿ ಬಿಷ್ಣೋಯ್​ಗೆ ವಿಕೆಟ್ ಒಪ್ಪಿಸಿದರು.

ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ಅನುಭವಿ ಜೋಸ್ ಬಟ್ಲರ್ (16), ವಾಷಿಂಗ್ಟನ್ ಸುಂದರ್ (2) ಬಂದಷ್ಟೇ ವೇಗವಾಗಿ ಔಟ್ ಆದರು. ರುದರ್ಫೋರ್ಡ್​ 22 ರನ್​ಗಳಿಸಿ ಔಟ್ ಆದರೆ, ಶಾರುಖ್ ಖಾನ್ 6 ಎಸೆತಗಳಲ್ಲಿ ಅಜೇಯ 11​ ರನ್​ಗಳಿಸಿದರು. ತೆವಾಟಿಯಾ ಸೊನ್ನೆ ಸುತ್ತಿದರೆ, ರಶೀದ್ ಖಾನ್ ಅಜೇಯ 4 ರನ್​ಗಳಿಸಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!