ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲೇಜಿನಲ್ಲಿ ಎಟಿಎಂ ಮತ್ತು ಓಪನ್ ಏರ್ ಜಿಮ್ ಸ್ಥಾಪಿಸುವಂತೆ ಒತ್ತಾಯಿಸಿ ನೀರಿನ ಟ್ಯಾಂಕ್ ಮೇಲೆ ಹತ್ತಿ ಘೋಷಣೆ ಕೂಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯದ ಮಹಾರಾಣಿ ಕಾಲೇಜಿನ ಓವರ್‌ಹೆಡ್ ಟ್ಯಾಂಕ್‌ಗೆ ಮೂವರು ವಿದ್ಯಾರ್ಥಿನಿಯರು ಹತ್ತಿ ಎಟಿಎಂ ಜತೆಗೆ ಬಯಲು ಜಿಮ್ ಸ್ಥಾಪಿಸುವಂತೆ ಒತ್ತಾಯಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿನಿಯರ ಬೇಡಿಕೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿ ವಿದ್ಯಾರ್ಥಿನಿಯರನ್ನು ಕೆಳಗಿಳಿಸಿದರು.
ಈ ಕುರಿತು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಯೋಗೇಶ್ ಗೋಯಲ್ ಮಾತನಾಡಿ, ಹಲವು ಬೇಡಿಕೆಗಳೊಂದಿಗೆ ಮೂವರು ವಿದ್ಯಾರ್ಥಿಗಳು ಟ್ಯಾಂಕ್ ಹತ್ತಿದ್ದಾರೆ. ಕಳೆದ 48 ಗಂಟೆಗಳಿಂದ ಅಲ್ಲಿಯೇ ಇದ್ದು, ಬೇಡಿಕೆ ಈಡೇರಿಸುವವರೆಗೂ ಕೆಳಗೆ ಇಳಿಯಲು ಒಪ್ಪದ ಕಾರಣ ಪೋಷಕರಿಗೆ ಕರೆ ಮಾಡಿ ಮನವರಿಕೆ ಮಾಡುವ ಪ್ರಯತ್ನ ಕೂಡ ಮಾಡಿದ್ವಿ. ವಿದ್ಯಾರ್ಥಿ ಸಂಘದ ಚುನಾವಣೆಗೂ ಮುನ್ನ ಕಾಲೇಜು ಆವರಣದಲ್ಲಿ ಎಟಿಎಂ ಯಂತ್ರ, ಬ್ಯಾಂಕ್ ಹಾಗೂ ಓಪನ್ ಏರ್ ಜಿಮ್ ಸ್ಥಾಪಿಸಲು ಉಪ್ಪಿಕೊಂಡ ಬಳಿಕ ಕೆಳಗಿಳಿದರು ಎಂದರು.