ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಬಸ್ ಸಂಚಾರ ಉಚಿತ ಎಂಬ ಯೋಜನೆ ಜಾರಿಯಾದಾಗಿಂದ ಎಲ್ಲಾ ಬಸ್ ನಲ್ಲೂ ಮಹಿಳೆಯರದ್ದೇ ರಾಜ್ಯಭಾರ ಶುರುವಾಗಿ ಬಿಟ್ಟಿದೆ.
ಈ ಯೋಜನೆಯಿಂದ ಬಸ್ ನಲ್ಲಿ 90 ಶೇಕಡಾ ಮಹಿಳೆಯರೇ ಪ್ರಯಾಣಿಸುತ್ತಾರೆ. ಇನ್ನು ಉಳಿದ 10 ಶೇಕಡಾ ಮಾತ್ರ ಪುರುಷರು ಪ್ರಯಾಣ ಮಾಡುವುದನ್ನ ಕಾಣಬಹುದಾಗಿದೆ. ಫ್ರೀ ಬಸ್ ಬಿಟ್ಟ ನಂತರ ಮಹಿಳೆಯರ ಓಡಾಟದಲ್ಲಿ ಬಹಳಷ್ಟು ಏರಿಕೆ ಗಮನಿಸಬಹುದು. ಆದರೆ ಈ ಯೋಜನೆ ಶುರು ಆದಾಗಿನಿಂದಲೂ ಹೆಚ್ಚು ಹೈಪ್ ಸೃಷ್ಟಿ ಮಾಡಿದೆ.
ಒಂದು ಕಡೆ ಯೋಜನೆ ಯಶಸ್ವಿಯಾದರೆ ಇನ್ನೊಂದು ಕಡೆ ಬಹಳ ತೊಂದರೆ ಉಂಟುಮಾಡುತ್ತಿದೆ. ಪ್ರತಿ ದಿನ ಬಸ್ ನ ಸೀಟ್ ಗೆ ಮಹಿಳೆಯರ ಮಧ್ಯೆಯೇ ಹೆಚ್ಚು ಗಲಾಟೆ, ಕಿತ್ತಾಟ, ಹೊಡೆದಾಟ ಜಾಸ್ತಿ ಆಗುತ್ತಿದೆ. ಸಿಎಂ ಕುರ್ಚಿಗೂ ಇಲ್ಲದ ಪ್ರಾಮುಖ್ಯತೆ ಒಂದು ಬಸ್ ನ ಸೀಟ್ ಗೆ ಇಷ್ಟೊಂದು ಹೊಡೆದಾಟ, ಕಿತ್ತಾಟ ಶುರು ಆಗಿದೆ ಅಂದ್ರೆ ತಪ್ಪಿಲ್ಲ.
ಈಗ ಇಂತದೆ ಒಂದು ಕಿತ್ತಾಟ ಮತ್ತೊಮ್ಮೆ ಶುರು ಆಗಿದೆ. ಹೌದು, ಬೆಂಗಳೂರಿನ ಮೆಜೆಸ್ಟಿಕ್ ನಿಂದ ಪೀಣ್ಯ ಮಾರ್ಗವಾಗಿ ಸಂಚರಿಸುವ ಬಸ್ ನಲ್ಲಿ ಜನರ ಸಂಖ್ಯೆ ಬಸ್ ಒಳಗಡೆ ಹೆಚ್ಚಿದ್ದ ಕಾರಣ ಪ್ರಯಾಣಿಕರಿಗೆ ಉಸಿರಾಡಲು ಕಷ್ಟವಾಗಿದೆ. ಕಿಟಕಿ ಓಪನ್ ಮಾಡುವ ವಿಚಾರದಲ್ಲಿ ಒಂದು ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಕಿಟಕಿ ತೆಗೀರಿ ಎಂದು ಹೇಳಿದಕ್ಕೆ ಇಬ್ಬರು ಮಹಿಳೆಯರ ನಡುವೆ ಹೊಡೆದಾಟವೇ ಶುರುವಾಗಿದೆ.
ಇಬ್ಬರು ಮಹಿಳೆಯರು ಪರಸ್ಪರ ಬೈದುಕೊಂಡು ಅದು ಚಪ್ಪಲಿಯಿಂದ ಹೊಡೆದಾಡುವ ಮಟ್ಟಿಗೆ ತಲುಪಿದೆ. ಇದೀಗ ಬಸ್ ನಲ್ಲಿ ನಡೆದ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದನ್ನು ನೋಡಿದ ಜನರು ಇಷ್ಟು ಚಿಕ್ಕ ವಿಷಯಕ್ಕೆ ಇಷ್ಟೆಲ್ಲಾ ಡ್ರಾಮಾ ಬೇಕಿತ್ತಾ ಎನ್ನುವ ಕಾಮೆಂಟ್ಸ್ ಮಾಡಿದ್ದಾರೆ.