ಗೀತಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ, ಆಶೀರ್ವಾದ ಮಾಡಿ: ಮಧು ಬಂಗಾರಪ್ಪ

ಹೊಸದಿಗಂತ ವರದಿ,ಶಿವಮೊಗ್ಗ:

ಗೀತಾ ಶಿವರಾಜ್ ಕುಮಾರ್ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ದಯಮಾಡಿ ಆಶೀರ್ವಾದ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಾವು ಒಬ್ಬ ಬಂಗಾರಪ್ಪ ಅವರನ್ನು ಕಳಕೊಂಡಿರಬಹುದು. ಆದರೆ ಜಿಲ್ಲೆಯಲ್ಲಿ ಲಕ್ಷಾಂತರ ಬಂಗಾರಪ್ಪ ಇದ್ದಾರೆ. ಗೀತ ನನಗೆ ಅಕ್ಕ ಇರಬಹುದು. ಆದರೆ ಚುನಾವಣೆಯಲ್ಲಿ ಗೆದ್ದ ನಂತರ ಮಧು ಮೀಡಿಯೇಟರ್ ಆಗುವುದಿಲ್ಲ.  ಬಂಗಾರಪ್ಪ ತರಹ ಗೀತಾ ಶಿವರಾಜಕುಮಾರ್ ನೇರ ಕೆಲಸ ಮಾಡುತ್ತಾರೆ. ಬಂಗಾರಪ್ಪ ಹೋರಾಟದ ಧ್ವನಿಯನ್ನು ಗೀತಾ ಮೂಲಕ ಪಡೆಯಬಹುದು ಎಂದರು.

ಬಂಗಾರಪ್ಪ ಕೊರತೆ ಜಿಲ್ಲೆ, ರಾಜ್ಯದಲ್ಲಿ ಇದೆ. ಬಂಗಾರಪ್ಪ ಧ್ವನಿ ಆಗಿ ಗೀತಾ ಇರುತ್ತಾರೆ. ನಿಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!