ಮನೆ ಊಟ ಕೊಡಿ: ಜೈಲು ಅಧಿಕಾರಿಗಳಿಗೆ ನಟ ದರ್ಶನ್ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್​ ಜೈಲು ಊಟಕ್ಕಾಗಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಈ ಹಿಂದೆ ಮನೆ ಊಟ ಹಾಗೂ ಹಾಸಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯು ಹೈಕೋರ್ಟ್​ನಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದು ಅಲ್ಲಿ ವಜಾ ಆಗಿತ್ತು. ಬಳಿಕ ವಕೀಲರು ದರ್ಶನ್​ರ ಅರ್ಜಿಯನ್ನು ಹಿಂಪಡೆದಿದ್ದರು. ಈಗ ದರ್ಶನ್ ಮತ್ತೊಮ್ಮೆ ಮನೆ ಊಟಕ್ಕಾಗಿ ಮನವಿ ಸಲ್ಲಿಸಿದ್ದು, ಈ ಬಾರಿ ಜೈಲಧಿಕಾರಿಗಳಿಗೆ ಮತ್ತು ಜೈಲಿನ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜೈಲು ವೈದ್ಯಾಧಿಕಾರಿ, ಕಾರಾಗೃಹ ಎಡಿಜಿಪಿಗೆ ಪತ್ರ ಬರೆದಿರುವ ನಟ ದರ್ಶನ್, ತಮಗೆ ಮನೆ ಊಟ ತರಿಸಿಕೊಳ್ಳಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.

‘22/06/24 ರಂದು ಕೇಂದ್ರ ಕಾರಾಗೃಕಹಕ್ಕೆ ಬಂದಿದ್ದು ನಾನು ದಿನನಿತ್ಯ ನನ್ನ ಮನೆಯಲ್ಲಿದ್ದಾಗ ವ್ಯಾಯಾಮ ಮಾಡುತ್ತಿದ್ದೆ ಅದರ ಜೊತೆ ಪೌಷ್ಟಿಕ (ಪ್ರೋಟಿನ್ ) ಆಹಾರ ಸೇವಿಸುತ್ತಿದ್ದೆ ಮತ್ತು ದಿನನಿತ್ಯ ಪೌಷಷ್ಟಿಕ ಆಹಾರ ತಿನ್ನುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರ ಕೊರತೆ ಇದ್ದು ನನ್ನ ದೇಹದ ತೂಕದಲ್ಲಿ ಸುಮಾರು ಹತ್ತು ಕೆ.ಜಿ ಯಷ್ಟು ಇಳಿದಿದ್ದೆ . ಆದ ಕಾರಣ ದಯಮಾಡಿ ನನಗೆ ಮನೆ ಊಟದ ವಯವಸ್ಥೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರಿ ಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ .

ಜೈಲು ವೈದ್ಯಾಧಿಕಾರಿಗಳು ಜಾಗೂ ಜೈಲು ಮಹಾ ನಿರ್ದೇಶಕರನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!