ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸರ್ಕಾರ ಇದೆಯೇ? ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳೋ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಬಸ್ ಟಿಕೆಟ್ ದರ ಏರಿಕೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏರಿಕೆಯಾಗಿರುವುದು ಆಶ್ಚರ್ಯವೇನಿಲ್ಲ ಎಂದರು. ರಾಜ್ಯದ ಜನರು ಟಿಕೆಟ್ ಬೆಲೆ ಏರಿಕೆಯನ್ನು 2-3 ದಿನಗಳಲ್ಲಿ ಮರೆತು ಹೋಗುತ್ತಾರೆ. ಮೂರನೇ ದಿನ ಜನರೇ ಅಡ್ಜೆಸ್ಟ್ ಆಗುತ್ತಾರೆ.
ಮದ್ಯದ ದರ ಏರಿಕೆ ಮಾಡಿದರು. ಈಗ ನೀರಿನ ದರವೂ ಏರಿಕೆ ಆಗುತ್ತಂತೆ. ಹೊಸ ವರ್ಷದಲ್ಲಿ ನಾಡಿನ ಜನ ಬೆಲೆ ಏರಿಕೆಗೆ ತಯಾರಾಗಿ ಎಂದು ಈ ಸರ್ಕಾರ ಸಂದೇಶ ಕೊಡುತ್ತಿದೆ ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.