ನನ್ನ ಕೊನೆ ಉಸಿರು ಇರೋವರೆಗೂ ಜನರಿಗಾಗಿ ಕೆಲಸ ಮಾಡಲು ಶಕ್ತಿ ಕೊಡು: ದೇವರಲ್ಲಿ ಪ್ರಾರ್ಥಿಸಿದ ಹೆಚ್.ಡಿ ದೇವೇಗೌಡ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ನನ್ನ ಕೊನೆ ಉಸಿರು ಇರೋವರೆಗೂ ನನ್ನ ಜನರಿಗಾಗಿ ಕೈಲಾದ ಕೆಲಸ ಮಾಡಲು ಶಕ್ತಿ ಕೊಡು ಎಂದು ಭಗವಂತನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರಾರ್ಥಿಸಿದ್ದಾರೆ.

ಚಿಕ್ಕಬಳ್ಳಾಪುರ (Chikkaballapur) ನಗರದ ಆದಿಚುಂಚನಗಿರಿ ಶಾಖಾ ಮಠದ ಮುಂಭಾಗದ ಸೂಲಾಲಪ್ಪನದಿನ್ನೆಯ ಶ್ರೀವೀರಾಂಜನೇಯಸ್ವಾಮಿ ದೇವಾಲಯದ ಬಳಿ ನಡೆದ ಕುಂಭಾಭಿಷೇಕ, ಬಾಲಗಂಗಾಧರನಾಥಶ್ರೀಗಳ 80ನೇ ಜಯಂತೋತ್ಸವ ಹಾಗೂ ನಿರ್ಮಲಾನಂದನಾಥ ಶ್ರೀಗಳ 12ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವದಲ್ಲಿ ಅವರು ಭಾಗಿಯಾಗಿ , ಮಾತನಾಡಿದ ಅವರು, ನಾನು ರೈತನ ಮಗ, ನನ್ನ ಕೊನೆ ಉಸಿರು ಹೋಗುವವರೆಗೂ, ನನ್ನ ಶಕ್ತಿ ಇರುವವರೆಗೂ ಹೋರಾಟ ಮಾಡುತ್ತೇನೆ. ನಾನು ಕುಳಿತುಕೊಳ್ಳುವ ವ್ಯಕ್ತಿಯಲ್ಲ. ನಾನು ಯಾರ ಬಗ್ಗೆಯೂ ಮಾತನಾಡಲ್ಲ ಎಂದಿದ್ದಾರೆ.

ಯಾವುದೆ ಪಕ್ಷ ಯಾವುದೇ ಜಾತಿ ನಾಯಕರು ಇದ್ರೂ ಲಘುವಾಗಿ ಮಾತನಾಡಿಲ್ಲ. ನನ್ನ ಉಸಿರು ಇರುವಾಗಲೇ ರಾಜ್ಯಕ್ಕೆ ಏನಾದ್ರೂ ಒಳ್ಳೆಯದು ಮಾಡಬೇಕು. ಕೆಂಪು ಕೋಟೆಯ ಮೇಲೆ ಒಂದು ಸಲ ಬಾವುಟ ಹಾರಿಸಿದ್ದೇನೆ ಅಂತ ಶ್ರೀಗಳು ಹೇಳ್ತಿದ್ರು. ನನ್ನ ಶಕ್ತಿ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಆಗಿದ್ರು. ಆದರೆ ಸ್ವಲ್ಪ ವ್ಯತ್ಯಾಸವಾದ ಕಾರಣ ತಕ್ಷಣ ನಾನೇ ಬಗೆಹರಿಸಿಕೊಂಡೆ ಎಂದಿದ್ದಾರೆ.

ನನ್ನ ಜನರಿಗಾಗಿ ಪಾರ್ಲಿಮೆಂಟ್‌ನಲ್ಲಿ ಹೋರಾಟ ಮಾಡುವ ಶಕ್ತಿ ಕೊಡು ಎಂದು ಕುಲದೇವರು ಈಶ್ವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!