ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಒಂದು ಗಂಟೆ ವಿನಾಯಿತಿ ನೀಡಿ: ಸಿಎಂ ಸಿದ್ದರಾಮಯ್ಯಗೆ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ರಂಜಾನ್ ತಿಂಗಳಲ್ಲಿ ಒಂದು ಗಂಟೆ ವಿನಾಯಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಇಬ್ಬರು ಕೆಪಿಸಿಸಿ ಉಪಾಧ್ಯಕ್ಷರು ಮನವಿ ಮಾಡಿದ್ದಾರೆ.

ಈಗಾಗಲೇ ತೆಲಂಗಾಣದಲ್ಲಿ ಮುಸ್ಲಿಂ ನೌಕರರ ಕೆಲಸದ ಅವಧಿ ಕಡಿತ ಮಾಡಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದೇಶ ನೀಡಿದೆ. ಹೀಗಾಗಿ ಕರ್ನಾಟಕದಲ್ಲೂ ಇದೇ ರೀತಿ ಕೆಲಸದ ಅವಧಿ ಕಡಿಮೆ ಮಾಡಿ, ಮುಸ್ಲಿಂ ಸರ್ಕಾರಿ ನೌಕರರ ರಂಜಾನ್ ಉಪವಾಸಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ಸಯ್ಯದ್ ಅಹ್ಮದ್ ಸಿಎಂಗೆ ಮನವಿ ಮಾಡಿದ್ದಾರೆ.

ತೆಲಂಗಾಣ ಸರ್ಕಾರ ಸ್ವಯಂ ಪ್ರೇರಿತವಾಗಿ ಕೊಟ್ಟಿದೆ. ಇಲ್ಲಿ ನಮ್ಮದೇ ಸರ್ಕಾರ ಇದೆ. ಹೀಗಾಗಿ ರಂಜಾನ್ ನಲ್ಲಿ ಒಂದು ತಿಂಗಳು ಉಪವಾಸ ಇರುತ್ತಾರೆ. ಸಾಕಷ್ಟು ಸುಸ್ತಾಗುತ್ತೆ ಕೆಲಸ ಮಾಡೋದಕ್ಕೆ ಸಾಧ್ಯ ಆಗಲ್ಲ. ಹೀಗಾಗಿ ಒಂದು ಗಂಟೆ ಮುಂಚಿತವಾಗಿ ನೌಕರರಿಗೆ ಬಿಡುವು ಕೊಟ್ಟರೆ ಒಳ್ಳೆಯದು. ಇಫ್ತಿಯಾರ್ ಮಾಡಬಹುದು ನಮಾಜ್ ಮಾಡಲು ಕೂಡ ಅವಕಾಶ ಆಗಲಿದೆ ಎಂದು ಎಆರ್‌ಎಂ ಹುಸೇನ್ ಹೇಳಿದ್ದಾರೆ.

ಇದೇ ಕಾರಣಕ್ಕೆ ಸರ್ಕಾರಿ ಮುಸ್ಲಿಂ ನೌಕರರಿಗೆ ವಿನಾಯಿತಿ ಕೊಡಿ ಅಂತ ಕೇಳುತ್ತಿದ್ದೇವೆ. ಯಾವುದೇ ದುರುದ್ದೇಶದಿಂದ ಕೇಳುತ್ತಿಲ್ಲ. ಕಾಲಾವಕಾಶವನ್ನು ಕೊಟ್ಟರೆ ಒಳ್ಳೆ ಸಂದೇಶ ಹೋಗಬಹುದು. ಈಗಾಗಲೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಗೆ ಪತ್ರ ನೀಡಿದ್ದೇವೆ. ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕಿತ್ತು ಆದರೆ ಅವರು ಕ್ಯಾಬಿನೆಟ್ ಸಭೆಯಲ್ಲಿದ್ದರು. ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ ಅವರ ಮೂಲಕ ವಿಚಾರ ತಲುಪಿಸಿದ್ದೇವೆ. ವಿನಾಯತಿ ಕೊಟ್ಟರೆ ಸ್ವಾಗತ ಕೊಡದೆ ಇದ್ದರೂ ಸ್ವಾಗತ ಎಂದು ಹೇಳಿದ್ದಾರೆ.

ರಂಜಾನ್ ತಿಂಗಳಲ್ಲಿ ಉಪವಾಸ ಇರ್ತೀವಿ, ಒಂದು ಗಂಟೆ ವಿನಾಯಿತಿ ಕೊಡಿ ಅಂತ ಕೇಳ್ತಿದ್ದೇವೆ. ಇದು ವಿವಾದ ಆಗಬಾರದು ಎಂಬುದು ನನ್ನ ಅನಿಸಿಕೆ. ದಸರಾ ಹಬ್ಬಕ್ಕೆ ಹತ್ತು ದಿನ ಹದಿನೈದು ದಿನ ರಜೆ ಕೊಡುತ್ತಿದ್ದರು. ಮೊದಲೆಲ್ಲಾ ಒಂದು ತಿಂಗಳು ರಜೆ ಕೊಡುತ್ತಿದ್ದರು. ಅದಕ್ಕೆ ನಾವು ಅಪಸ್ವರ ಎತ್ತಿಲ್ಲ ಈಗಲೂ 10 ರಿಂದ 15 ದಿನ ರಜೆ ಕೊಡುತ್ತಿದ್ದಾರೆ. ನಾವು ಏನಾದ್ರು ಪ್ರಶ್ನೆ ಎತ್ತಿದ್ದೇವೆಯೇ? ನಾವು ರಂಜಾನ್ ತಿಂಗಳು ಅದರಲ್ಲೂ ಒಂದು ಗಂಟೆ ವಿನಾಯಿತಿ ಕೊಡಿ ಅಂತ ಕೇಳುತ್ತಿದ್ದೇವೆ. ಬಿಜೆಪಿಯವರು ಸಹಜವಾಗಿ ಟೀಕೆ ಟಿಪ್ಪಣಿ ಮಾಡುತ್ತಾರೆ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಮಾಡಿದ್ದಾರಲ್ಲ ಆಗ ಯಾಕೆ ಸುಮ್ಮನೆ ಇದ್ದಾರೆ, ಚಕ್ಕಾರ ಎತ್ತಲಿ. ವಿವಾದ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!