ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆ ಜಾರಿಯಾಗಿದ್ದು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರಕಾರ ಹೇಳಿಕೊಂಡಿತ್ತು.
ಆದ್ರೆ ಇದೀಗ ಅಕ್ಕಿಯ ಕೊರತೆಯಿಂದ 5 ಕೆಜಿ ಅಕ್ಕಿ ಜೊತೆಗೆ 5 ಕೆಜಿ ಅಕ್ಕಿಯ ಹಣ ನೀಡಲು ಮುಂದಾಗಿದೆ.
ಆದರೇ ಇದಕ್ಕೆ ಪಡಿತರ ವಿತರಕರು ವಿರೋಧಿಸಿದ್ದಾರೆ. ಇದರಿಂದ ನಮ್ಮ ಕಮಿಷನ್‌ಗೆ ಬ್ರೇಕ್ ಬೀಳಲಿದೆ. ಸರ್ಕಾರ ಹಣವನ್ನ ನೀಡದೇ ಅದರ ಬದಲು ಇತರೆ ದಿನಸಿ ಪದಾರ್ಥಗಳನ್ನ ನೀಡಬೇಕು. ರಾಜ್ಯದಲ್ಲೇ ಬೆಳೆಯುವ ಬೆಳೆಕಾಳು, ಸಕ್ಕರೆ, ಉಪ್ಪು, ಬೆಲ್ಲ, ಹೀಗೆ ಬೇರೆ ಪದಾರ್ಥಗಳನ್ನ ಕೊಡಿ. ಹಣ ನೀಡುವುದರಿಂದ ಸರ್ಕಾರಕ್ಕೂ ಹೊರೆ ಆಗಲಿದೆ ಎಂಬ ವಿಚಾರವನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಪಡಿತರ ವಿತರಕರ ಸಂಘ ನಿರ್ಧರಿಸಿದೆ.
ಈ ಸಂಬಂಧ ಇದೇ ಜುಲೈ 4 ಸಭೆ ಮಾಡಲು ಪಡಿತರ ವಿತರಕರ ಸಂಘ ನಿರ್ಧಾರ ಮಾಡಿದೆ. ಸರ್ಕಾರ ಹಣ ನೀಡಲು ಮುಂದಾದರೆ ನಾವೂ ಹೋರಾಟ ಮಾಡಬೇಕಾಗುತ್ತದೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.